ಜಗತ್ತು ಕೊರೋನಾ ಭೀತಿಯಲ್ಲಿದ್ದರೆ ಕ್ಷಿಪಣಿ ಪರೀಕ್ಷೆ ನಡೆಸುತ್ತಿದೆ ಈ ದೇಶ !

Update: 2020-03-21 17:10 GMT

ಸಿಯೋಲ್, ಮಾ. 21: ಇಡೀ ಜಗತ್ತು ಮಾರಕ ಕೊರೋನವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಮುಳುಗಿದ್ದರೆ, ಉತ್ತರ ಕೊರಿಯದ ನಾಯಕ ಮಾತ್ರ ಕ್ಷಿಪಣಿ ಪರೀಕ್ಷೆಯಲ್ಲಿ ವ್ಯಸ್ತರಾಗಿದ್ದಾರೆ.

ಉತ್ತರ ಕೊರಿಯವು ಶನಿವಾರ ಕಿರು ವ್ಯಾಪ್ತಿಯದ್ದೆಂದು ಭಾವಿಸಲಾದ ಎರಡು ಕ್ಷಿಪಣಿಗಳನ್ನು ಪೂರ್ವ ಕರಾವಳಿಯಲ್ಲಿ ಸಮುದ್ರಕ್ಕೆ ಹಾರಿಬಿಟ್ಟಿದೆ. ಕ್ಷಿಪಣಿಗಳನ್ನು ನಾರ್ತ್ ಪ್ಯಾಂಗನ್ ಪ್ರಾಂತದಿಂದ ಜಪಾನ್ ಸಮುದ್ರಕ್ಕೆ ಹಾರಿಸಲಾಗಿದೆ ಎಂದು ದಕ್ಷಿಣ ಕೊರಿಯದ ಜಂಟಿ ಸೇನಾ ಮುಖ್ಯಸ್ಥ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಆದರೆ ಅದು ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಅಮೆರಿಕದಿಂದ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ

ಅದೇ ವೇಳೆ, ಉತ್ತರ ಕೊರಿಯದ ದಾರಿಯನ್ನೇ ಅಮೆರಿಕವೂ ತುಳಿದಿದೆ. ಶಸ್ತ್ರರಹಿತ ಹೈಪರ್‌ಸಾನಿಕ್ ಕ್ಷಿಪಣಿಯೊಂದನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿರುವುದಾಗಿ ಅಮೆರಿಕ ಶುಕ್ರವಾರ ಘೋಷಿಸಿದೆ. ಹೈಪರ್‌ಸಾನಿಕ್ ಕ್ಷಿಪಣಿಯು ಪರಮಾಣು ಶಕ್ತ ಅಸ್ತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News