×
Ad

ಕೊರೊನ ವೈರಸ್: ಸ್ಯಾನಿಟೈಸರ್ಸ್, ಮಾಸ್ಕ್ ಬೆಲೆ ನಿಗದಿಗೊಳಿಸಿದ ಕೇಂದ್ರ

Update: 2020-03-21 23:50 IST

ಹೊಸದಿಲ್ಲಿ, ಮಾ.21: ಕೊರೊನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹ್ಯಾಂಡ್ ಸ್ಯಾನಿಟೈಸರ್ಸ್ ಮತ್ತು ಮುಖಗವಚ(ಮಾಸ್ಕ್)ಗಳನ್ನು ಅಧಿಕ ಬೆಲೆಗೆ ಮಾರುತ್ತಿರುವ ದೂರಿನ ಹಿನ್ನೆಲೆಯಲ್ಲಿ , 200 ಮಿ.ಲೀ. ಬಾಟಲಿ ಸ್ಯಾನಿಟೈಸರ್ಸ್‌ಗೆ 100 ರೂ. ಬೆಲೆ ನಿಗದಿಗೊಳಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಅಲ್ಲದೆ 2 ಲೇಯರ್‌ನ ಮಾಸ್ಕ್‌ಗಳ ಬೆಲೆ 8 ರೂ, 3 ಲೇಯರ್‌ನ ಮಾಸ್ಕ್‌ಗಳ ಬೆಲೆ 10 ರೂ. ಆಗಿರುತ್ತದೆ ಎಂದವರು ಹೇಳಿದ್ದಾರೆ. ಶನಿವಾರದಿಂದಲೇ ಈ ಆದೇಶ ಜಾರಿಯಾಗುತ್ತದೆ ಎಂದು ಸರಕಾರ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ , ಸ್ಯಾನಿಟೈಸರ್ಸ್ ಹಾಗೂ ಮಾಸ್ಕ್‌ಗಳನ್ನು ಅಗತ್ಯದ ವಸ್ತುಗಳ ಪಟ್ಟಿಯಲ್ಲಿ ಸರಕಾರ ಸೇರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News