'NPR ಹಿಂಪಡೆಯಿರಿ, ಜನಗಣತಿ ಮುಂದೂಡಿ': ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಟ್ವಿಟರ್ ನಲ್ಲಿ ಅಭಿಯಾನ

Update: 2020-03-23 17:38 GMT

ದೇಶಾದ್ಯಂತ ಕೊರೋನ ಆತಂಕ ನೆಲೆಸಿದ್ದು, ಇಂದು ಇಬ್ಬರು ಈ ಮಹಾಮಾರಿಗೆ ಬಲಿಯಾಗುವುದರೊಂದಿಗೆ ಮೃತರ ಸಂಖ್ಯೆ 9ಕ್ಕೇರಿದೆ. ದೇಶದಲ್ಲಿ 471 ಮಂದಿಗೆ ಕೊರೋನವೈರಸ್ ಇರುವುದು ದೃಢಪಟ್ಟಿದೆ. ಈ ನಡುವೆ ಕೆಲವೆಡೆ ಜನಗಣತಿ ನಡೆಯುತ್ತಿದ್ದು, ಜನರ ಆರೋಗ್ಯದ, ಗಣತಿ ನಡೆಸುವವರ ಆರೋಗ್ಯದ ದೃಷ್ಟಿಯಿಂದ ಮತ್ತು ಜಗತ್ತು ಎದುರಿಸುತ್ತಿರುವ ಕೊರೊನಾ ಬಿಕ್ಕಟ್ಟನ್ನು ಮನಗಂಡು ಸರಕಾರ ಜನಗಣತಿಯನ್ನು ಮುಂದೂಡಿ, ಎನ್ ಪಿಆರ್ ಅನ್ನು ಹಿಂಪಡೆಯಬೇಕು ಎನ್ನುವ ಆಗ್ರಹ ಕೇಳಿಬಂದಿದೆ. ಈ ಬಗ್ಗೆ ಇಂದು #PostponeCensus_WithdrawNPR ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು.

ಸೋಮವಾರ 7 ಗಂಟೆಗೆ ಈ ಹ್ಯಾಶ್ ಟ್ಯಾಗ್ ನಲ್ಲಿ ಆಂದೋಲನವನ್ನು ಆರಂಭಿಸಿ ಎನ್ ಪಿಆರ್ ಹಿಂಪಡೆದು, ಜನಗಣತಿಯನ್ನು ಮುಂದೂಡುವಂತೆ ಸರಕಾರವನ್ನು ಆಗ್ರಹಿಸಲು ಕರೆ ನೀಡಲಾಗಿತ್ತು. ಈ ಕರೆಗೆ ಓಗೊಟ್ಟ ನೂರಾರು ಮಂದಿ ತಮ್ಮ ಆಗ್ರಹವನ್ನು ಸರಕಾರದ ಮುಂದಿಟ್ಟಿದ್ದಾರೆ.

NPR ನಮ್ಮ ದೇಶಕ್ಕೆ ಅಪಾಯ,ಆದರೆ ಮನೆಗಣತಿ ಈ ಸಂದರ್ಭದಲ್ಲಿ ಅಗತ್ಯವಿಲ್ಲ...  NPR ಅನ್ನು ಹಿಂಪಡೆಯಿರಿ, ಮನೆಗಣತಿಯನ್ನು ಮುಂದೂಡಿ...  ಎಂದು ಭುವನ್ ಕುಮಾರ್ ಎಂಬವರು ಟ್ವೀಟ್ ಮಾಡಿದ್ದಾರೆ.

"ಪ್ರೀತಿಯ ಕೇಂದ್ರ ಸರಕಾರ, ಧರ್ಮ ರಾಜಕಾರಣ ನಿಮಗಷ್ಟು ಮುಖ್ಯವೇ?, ಅದೂ ಈ ಸಮಯದಲ್ಲಿ?, ಜನಗಣತಿಯನ್ನು ಮುಂದೂಡುವುದು ಮತ್ತು ಎನ್ ಪಿಆರ್ ಅನ್ನು ಹಿಂಪಡೆಯುವುದು ಈಗಿನ ಅಗತ್ಯ ಎಂದು ನಿಮಗನಿಸುವುದಿಲ್ಲವೇ?" ಎಂದು ಮೋನಿಕಾ ಟ್ವೀಟ್ ಮಾಡಿದ್ದಾರೆ.

"ಕೊರೋನವೈರಸ್ ತಡೆಗೆ ಜನಗಣತಿಯನ್ನು ಮುಂದೂಡಿ ಎನ್ ಪಿಆರ್ ಹಿಂಪಡೆಯುವುದು ಅಗತ್ಯವಾಗಿದೆ. ಮನೆಮನೆಗೆ ಹೋಗುವುದರಿಂದ ಶಿಕ್ಷಕರು ಅಪಾಯವನ್ನು ಎದುರಿಸಬೇಕಾದೀತು" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News