ವಿಶ್ವಾಸಮತ ಜಯಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

Update: 2020-03-24 17:28 GMT

ಹೊಸದಿಲ್ಲಿ,ಮಾ.24: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಗೆದ್ದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಸದನಕ್ಕೆ ಗೈರುಹಾಜರಾಗಿದ್ದರು.

ವಿಧಾನಸಭೆಯ ವಿಶೇಷ ಅಧಿವೇಶನ ಆರಂಭಗೊಂಡ ಬೆನ್ನಿಗೇ ಚೌಹಾಣ್ ಅವರು ಒಂದು ಸಾಲಿನ ವಿಶ್ವಾಸಮತ ಯಾಚನೆ ನಿರ್ಣಯವನ್ನು ಮಂಡಿಸಿದರು. ಸದಸ್ಯರು ಧ್ವನಿಮತದಿಂದ ಅದನ್ನು ಬೆಂಬಲಿಸಿದರು. ಹಿರಿಯ ಬಿಜೆಪಿ ಶಾಸಕ ಜಗದೀಶ ದೇವ್ಡಾ ಅವರು ಸ್ಪೀಕರ್ ಕರ್ತವ್ಯವನ್ನು ನಿರ್ವಹಿಸಿದರು.

ವಿಶ್ವಾಸಮತ ನಿರ್ಣಯ ಅಂಗೀಕಾರದ ಬಳಿಕ ಸದನವನ್ನು ಮಾ.27ರವರೆಗೆ ಮುಂದೂಡಲಾಯಿತು.

ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿರುವ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವು ಬಹುಮತವನ್ನು ಕಳೆದುಕೊಂಡಿತ್ತು. ಸದನದಲ್ಲಿ ವಿಶ್ವಾಸಮತವನ್ನು ಯಾಚಿಸಿ ಬಹುಮತವನ್ನು ಸಿದ್ಧಪಡಿಸಲು ಸರ್ವೋಚ್ಚ ನ್ಯಾಯಾಲಯವು ವಿಧಿಸಿದ್ದ ಗಡುವಿಗೆ ಮೊದಲೇ ಗುರುವಾರ ಕಮಲನಾಥ್ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News