ಮುಂಬೈ ಬಳಿಯ ಪಂಜು ಕೊರೋನವೈರಸ್ ಭೀತಿಯಿಂದ ಸ್ವಯಂ ನಿರ್ಬಂಧ ವಿಧಿಸಿಕೊಂಡ ವಿಶ್ವದ ಮೊದಲ ದ್ವೀಪ

Update: 2020-03-24 17:39 GMT

ಮುಂಬೈ,ಮಾ.24: ಕೊರೋನವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಕರಾವಳಿಯಾಚೆ ಇರುವ ಪಂಜು ದ್ವೀಪದ ಎಲ್ಲ ನಿವಾಸಿಗಳು ಎರಡು ದಿನಗಳ ಹಿಂದಿನಿಂದಲೇ ಸ್ವಯಂ ನಿರ್ಬಂಧಕ್ಕೊಳಗಾಗಿದ್ದಾರೆ,ತನ್ಮೂಲಕ ಪಂಜು ದ್ವೀಪವು ಬಹುಶಃ ಇಂತಹ ಸ್ವಯಂಪ್ರೇರಿತ ಕ್ರಮವನ್ನು ಕೈಗೊಂಡ ವಿಶ್ವದ ಮೊದಲ ನಡುಗಡ್ಡೆಯಾಗಿದೆ.

ಥಾಣೆ ಗಡಿಗೆ ಸಮೀಪ,ಬೊರಿವಿಲಿ ನಿಲ್ದಾಣದಿಂದ ಸುಮಾರು 15 ಕಿ.ಮೀ. ಅಂತರದಲ್ಲಿರುವ ಪಶ್ಚಿಮ ರೈಲ್ವೆಯ ಬೊರಿವಿಲಿ-ವಿರಾರ ಉಪನಗರ ವಿಭಾಗದಲ್ಲಿ ದಿನನಿತ್ಯ ಪ್ರಯಾಣಿಸುವ ಮಿಲಿಯಾಂತರ ಪ್ರಯಾಣಿಕರ ಗಮನಕ್ಕೆ ಈ ದ್ವೀಪವು ಬಂದಿಲ್ಲ.

600 ಎಕರೆ ವಿಸ್ತೀರ್ಣದ ಈ ಹಚ್ಚಹಸಿರು ದ್ವೀಪವು ಥಾಣೆ ಕ್ರೀಕ್‌ನ ಉಭಯ ಪಾರ್ಶ್ವಗಳಲ್ಲಿ ಉಪ್ಪು ತಯಾರಿಕೆ ಹಾಗೂ ತೆಂಗು,ಭತ್ತ,ಹಣ್ಣುಗಳು ಮತ್ತು ತರಕಾರಿಗಳ ಕೃಷಿಯಲ್ಲಿ ತೊಡಗಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ರವಿವಾರದ ಜನತಾ ಕರ್ಫ್ಯೂ ಕರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಂದ ಇತರ ಕಠಿಣ ಕ್ರಮಗಳ ಅನುಷ್ಠಾನದ ಬಳಿಕ ದ್ವೀಪದ ಸುಮಾರು 1,500 ನಿವಾಸಿಗಳು ಮಾ.31ರವರೆಗೆ ಅಥವಾ ಅಧಿಕಾರಿಗಳು ಬಯಸುವವರೆಗೆ ಸ್ವಯಂ ನಿರ್ಬಂಧವನ್ನು ಹೇರಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಪಂಜು ಗ್ರಾಮದ ಸರಪಂಚ ಆಶಿಷ್ ಭೋಯಿರ್ ತಿಳಿಸಿದರು.

ಪಂಜು ದ್ವೀಪವನ್ನು ನೈಗಾಂವ್ ಮುಖ್ಯಭೂಮಿಯೊಡನೆ ಸಂಪರ್ಕಿಸುವ 30ರಷ್ಟು ದೋಣಿ ಸೇವೆಗಳನ್ನು ಅಮಾನತುಗೊಳಿಸಲಾಗಿದೆ. ತುರ್ತು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮಾತ್ರ ಅವುಗಳನ್ನು ಬಳಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News