ಖ್ಯಾತ ಸ್ಯಾಕ್ಸೋಫೋನ್ ವಾದಕ ಡಿಬಾಂಗೊ ಕೊರೋನ ಸೋಂಕಿಗೆ ಬಲಿ

Update: 2020-03-25 11:51 GMT

ಪ್ಯಾರಿಸ್ , ಮಾ.25: ಕ್ಯಾಮರೊನ್ ಮೂಲದ ಖ್ಯಾತ  ಸಂಗೀತಗಾರ, ಸ್ಯಾಕ್ಸೋಫೋನ್ ವಾದಕ ಮನು ಡಿಬಾಂಗೊ ಕೊರೋನ ವೈರಸ್ ಸೋಂಕಿನಿಂದಾಗಿ ನಿಧನರಾದರು.

ಅವರಿಗೆ 86 ವರ್ಷ ವಯಸ್ಸಾಗಿತ್ತು.  ನಾಲ್ವರು ಪುತ್ರರರನ್ನು ಅಗಲಿದ್ದಾರೆ. ಡಿಬಾಂಗೊ ಕಳೆದ ವಾರ ಕೊರೋನ ವೈರಸ್ ಸೋಂಕಿನಿಂದಾಗಿ ಪ್ಯಾರಿಸ್ ನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಅವರು ನಿಧನರಾದರು.

ಡಿಬಾಂಗೊ 1972ರ ಸೋಲ್ ಮಕೋಸಾ ಹಾಡಿನೊಂದಿಗೆ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು. 2009 ರಲ್ಲಿ ಮೈಕೆಲ್ ಜಾಕ್ಸನ್ ಮತ್ತು ರಿಹಾನ್ನಾ ವಿರುದ್ಧ ತನ್ನ ಸಂಗೀತವನ್ನು ಕದ್ದಿರುವುದಾಗಿ ಆರೋಪಿಸಿ ಮೊಕದ್ದಮೆ ಹೂಡಿದ್ದರು. ನ್ಯಾಯಾಲದಲ್ಲಿ ಈ ಪ್ರಕರಣ ಇತ್ಯರ್ಥಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News