ಕೊರೋನ ವಿರುದ್ಧದ ಹೋರಾಟಕ್ಕೆ ಮೆಸ್ಸಿ, ಪೆಪ್ ಗಾರ್ಡಿಯೊಲಾ ತಲಾ 8 ಕೋಟಿ ರೂ. ದೇಣಿಗೆ

Update: 2020-03-25 10:28 GMT
ಮೆಸ್ಸಿ

ಬಾರ್ಸಿಲೋನಾ : ಆರ್ಜೆಂಟಿನಾದ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಹಾಗೂ ಮ್ಯಾಂಚೆಸ್ಟರ್ ಸಿಟಿ ಮ್ಯಾನೇಜರ್ ಪೆಪ್ ಗಾರ್ಡಿಯೊಲಾ ಅವರು  ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ತಲಾ 8.2 ಕೋಟಿ ರೂ. ಧನಸಹಾಯ ನೀಡಿದ್ದಾರೆ. 

ಮೆಸ್ಸಿ ಅವರ ದೇಣಿಗೆಯು ಬಾರ್ಸಿಲೋನಾದ ಹಾಸ್ಪಿಟಲ್ ಕ್ಲಿನಿಕ್ ಹಾಗೂ ಅವರ ತವರು ದೇಶದ ಮೆಡಿಕಲ್ ಸೆಂಟರ್ ಒಂದರ ನಡುವೆ ಹಂಚಿಕೆಯಾಗಲಿದೆ.

ಗಾರ್ಡಿಯೊಲಾ ಅವರ ದೇಣಿಗೆಯು ಏಂಜಲ್ ಸೋಲೆರ್ ಡೇನಿಯಲ್ ಫೌಂಡೇಶನ್ ಹಾಗೂ ಬಾರ್ಸಿಲೋನ ಮೆಡಿಕಲ್ ಕಾಲೇಜು ಆರಂಭಿಸಿರುವ ಕೊರೋನ ವಿರುದ್ಧದ ಅಭಿಯಾನಕ್ಕೆ ದೊರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News