ಬ್ರಿಟನ್ ರಾಜಕುಮಾರ ಚಾರ್ಲ್ಸ್ ಗೆ ಕೊರೋನ ಸೋಂಕು

Update: 2020-03-25 12:03 GMT

ಲಂಡನ್ : ಬ್ರಿಟನ್ ದೇಶದ ರಾಜಕುಮಾರ ಚಾರ್ಲ್ಸ್ ಅವರಿಗೆ ಕೊರೋನ ವೈರಸ್ ಸೋಂಕು ತಗಲಿದೆ. ರಾಜಕುಮಾರನ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ. 71 ವರ್ಷದ ರಾಜಕುಮಾರ ಚಾರ್ಲ್ಸ್ ಮತ್ತವರ ಪತ್ನಿ ಕೆಮಿಲ್ಲಾ ಈಗ ಸ್ಕಾಟ್ಲೆಂಡ್‍ನ ಕ್ಲಾರೆನ್ಸ್ ಹೌಸ್‍ನಲ್ಲಿ ಕ್ವಾರಂಟೈನ್‍ನಲ್ಲಿದ್ದಾರೆ.

ರಾಜಕುಮಾರನಿಗೆ ಕೊರೋನ ವೈರಸ್‍ನ ಕೆಲವು ಲಕ್ಷಣಗಳು ಕಾಣಿಸಿಕೊಂಡಿವೆ ಹಾಗೂ ತಮ್ಮ ಮನೆಯಿಂದಲೇ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಚಾರ್ಲ್ಸ್ ಪತ್ನಿ ಕೆಮಿಲ್ಲಾ ಅವರನ್ನೂ ಪರೀಕ್ಷೆಗೆ ಗುರಿಪಡಿಸಲಾಗಿದ್ದು ಅವರಿಗೆ ಕೊರೋನ ಸೋಂಕು ಇಲ್ಲ ಎಂದು  ವೈದ್ಯಕೀಯ ಪರೀಕ್ಷೆ ದೃಢ ಪಡಿಸಿದೆ. ರಾಜಕುಮಾರನಿಗೆ ಹೇಗೆ ಸೋಂಕು ತಗಲಿತೆಂದು ಹೇಳುವುದು ಕಷ್ಟ ಅವರು ಇತ್ತೀಚೆಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

83 ವರ್ಷದ ರಾಣಿ ಎಲಿಝಬೆತ್ ಹಾಗೂ  98 ವರ್ಷದ ರಾಜಕುಮಾರ ಫಿಲಿಪ್ ಕೂಡ ಲಂಡನ್ ನಗರದ ಹೊರವಲಯದ ವಿಂಡ್ಸರ್ ಅರಮನೆಯಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News