ಕೊರೋನ ಪೀಡಿತರಿಗೆ ಕ್ವಾರಂಟೈನ್ ಕೇಂದ್ರಗಳಾಗಿ ರೈಲ್ವೆ ಬೋಗಿಗಳ ಬಳಕೆ

Update: 2020-03-26 16:13 GMT

ಹೊಸದಿಲ್ಲಿ, ಮಾ.26: ನೊವೆಲ್ ಕೊರೋನಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರಕಾರಗಳ ಜೊತೆ ಕೈಜೋಡಿಸಲಿರುವ ಭಾರತೀಯ ರೈಲ್ವೆಯು ತನ್ನ ಬೋಗಿಗಳನ್ನು ಕೊರೋನ ಪೀಡಿತರ ಕ್ವಾರಂಟೈನ್ (ದಿಗ್ಬಂಧನ) ಕೇಂದ್ರಗಳಾಗಿ ಪರಿವರ್ತಿಸುವ ಸಾಧ್ಯತೆಯಿದೆ. ಈಗ ಇರುವ ಬೋಗಿಗಳನ್ನು ವಾರ್ಡ್‌ಗಳಾಗಿ ಬದಲಾಯಿಸಲು ಅದು ಚಿಂತಿಸುತ್ತಿದೆ. ಇದರಲ್ಲಿ ಕೊರೋನಾ ರೋಗಿಗಳನ್ನು ನಿಗಾದಲ್ಲಿರಿಸಲು ಹಾಗೂ ಅವರಿಗ ಶುಶ್ರೂಷೆ ನೀಡುವ ಅರೆವೈದ್ಯಕೀಯ ಸಿಬ್ಬಂದಿ ಉಳಿದುಕೊಳ್ಳುವುದಕ್ಕೆ ಬಳಸಲಾಗುವುದು. ಇದಕ್ಕಾಗಿ ಬೋಗಿಗಳನ್ನು ಹೊಸದಾಗಿ ವಿನ್ಯಾಸಗೊಳಿಸಲಾಗುವುದು. ಈ ಬೋಗಿಗಳನ್ನು ಇರಿಸಲಾಗುವ ಸ್ಥಳಗಳನ್ನು ಗುರುತಿಸುವಂತೆ ರೈಲ್ವೆ ಇಲಾಖೆಯು ತನ್ನ ಅಧಿಕಾರಿಗಳಿಗೆ ಸೂಚಿಸಿದೆ. ಈ ಬೋಗಿಗಳಲ್ಲಿ ದೀರ್ಘಾವಧಿಯವರೆಗೆ ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸುವುದಕ್ಕಾಗಿಯೂ ಸಮರ್ಪಕ ಏರ್ಪಾಡುಗಳನ್ನು ಮಾಡುವಂತೆಯೂ ಅವರಿಗೆ ಸೂಚಿಸಲಾಗಿದೆ.

ಈ ಬೋಗಿಗಳಲ್ಲಿ ಕ್ವಾರಂಟೈನ್‌ನಲ್ಲಿಡಲಾಗುವ ರೋಗಿಗಳಿಗೆ ಆಹಾರವನ್ನು ಒದಗಿಸಲು ರೈಲ್ವೆಯ ಪ್ಯಾಂಟ್ರಿ (ಅಡುಗೆಮನೆ)ಗಳನ್ನು ಸಂಚಾರಿ ಕ್ಯಾಂಟೀನ್‌ಗಳನ್ನಾಗಿ ಪರಿವರ್ತಿಸಲಾಗುವುದು. ಕ್ವಾರಂಟೈನ್ ರೈಲು ಬೋಗಿಗಳಲ್ಲಿ ಇರಬೇಕಾದ ಅವಶ್ಯಕತೆಗಳ ಕುರಿತಾಗಿ ರೈಲ್ವೆ ನಿಗಮವು ಆರೋಗ್ಯಕೇಂದ್ರ ತಜ್ಞರ ಜೊತೆ ಸಮಾಲೋಚನೆ ನಡೆಸಲಿದೆ ಎಂದು ರೈಲ್ವೆ ನಿಗಮದ ಅಧ್ಯಕ್ಷ ವಿ.ಕೆ. ಯಾದವ್ ತಿಳಿಸಿದ್ದಾರೆ.

ಸುಮಾರು 20 ಸಾವಿರ ಬೋಗಿಗಳನ್ನು ಬಳಸಿಕೊಂಡು ಕನಿಷ್ಠ 10 ಸಾವಿರ ಐಸೋಲೇಶನ್ (ಪ್ರತ್ಯೇಕೀರಣಗೊಳಿಸುವ) ವಾರ್ಡ್‌ಗಳನ್ನು ಸ್ಥಾಪಿಸಲಾಗುವುದೆಂದು ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News