ನಿರ್ಲಕ್ಷಿಸಿದರೆ ಒಂದೂವರೆ ತಿಂಗಳಲ್ಲಿ ಭಾರತದಲ್ಲಿ ಇಷ್ಟು ಲಕ್ಷ ಮಂದಿಗೆ ಕೊರೋನ ಸೋಂಕು !

Update: 2020-03-26 19:04 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮಾ.26: ಅಂತರಾಷ್ಟ್ರೀಯ ವಿಜ್ಙಾನಿಗಳ ತಂಡವೊಂದಿ ನೀಡಿರುವ ವರದಿಯ ಪ್ರಕಾರ ಭಾರತದಲ್ಲಿ ಕೊರೋನ ಸೋಂಕಿತರ ಪ್ರಮಾಣ ಈಗಿರುವ ವೇಗದಲ್ಲೇ ಮುಂದುವರಿದರೆ ಮೇ ಎರಡನೇ ವಾರದೊಳಗೆ ದೇಶದಲ್ಲಿ ಒಂದು ಲಕ್ಷದಿಂದ 13 ಲಕ್ಷ ಮಂದಿಗೆ ಈ ಮಹಾ ಸೋಂಕು ತಗುಲುವ ಸಾಧ್ಯತೆ ಇದೆ !

ಅಮೇರಿಕಾದ ಜಾನ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯದ ದೇಬಶ್ರೀ ರೇ ಅವರ ಸಹಿತ ಇತರ ಸಂಶೋಧಕರು ಹಾಗೂ ವಿಜ್ಙಾನಿಗಳ ತಂಡ ನಡೆಸಿರುವ ಅಧ್ಯಯನದಲ್ಲಿ ಈ ಭಯಾನಕ ಫಲಿತಾಂಶ ಹೊರಬಿದ್ದಿದೆ. ಈ ಅಧ್ಯಯನದ ಪ್ರಕಾರ ಖಚಿತ ಕೊರೋನ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಭಾರತ ಇತರೆ ದೇಶಗಳಿಗೆ ಹೋಲಿಸಿದರೆ ಸರಿಯಾದ ಕ್ರಮವನ್ನು ತೆಗೆದುಕೊಂಡಿದ್ದರೂ ದೇಶದಲ್ಲಿ ನಿಜವಾಗಿಯೂ ಸೋಂಕಿತರಾಗಿರುವ ಪ್ರಕರಣಗಳ ಸಂಖ್ಯೆಯನ್ನು ಖಚಿತವಾಗಿ ಕಂಡುಕೊಳ್ಳುವಲ್ಲಿ ಅದು ಎಡವಿದೆ ಎಂದು ವರದಿ ತಿಳಿಸಿದೆ.

ಸೋಂಕಿತರ ಸಂಖ್ಯೆಯನ್ನು ಸರಿಯಾಗಿ ತಿಳಿಯಲು ನಡೆಸಿರುವ ಪರೀಕ್ಷೆಗಳ ಸಂಖ್ಯೆ, ಆ ಪರೀಕ್ಷೆಯ ಫಲಿತಾಂಶಗಳ ನಿಖರತೆ ಹಾಗೂ ಪರೀಕ್ಷೆಯ ಪ್ರಮಾಣ ಇವೆಲ್ಲವುಗಳನ್ನು ಅವಲಂಬಿಸಿವೆ. ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿದ್ದರೂ ಯಾವುದೇ ರೋಗ ಲಕ್ಷಣಗಳನ್ನು ಈವರೆಗೆ ತೋರಿಸಿದವರ ಸಂಖ್ಯೆ ಬಹಳಷ್ಟು ದೊಡ್ಡದಿರಬಹುದು ಎಂಬ ಶಂಕೆ ಈ ವರದಿಯಲ್ಲಿ ವ್ಯಕ್ತವಾಗಿದೆ. ಭಾರತದಲ್ಲಿ ಈವರೆಗೆ ಕೊರೋನ ಪರೀಕ್ಷೆಗೆ ಒಳಗಾದವರ ಸಂಖ್ಯೆ ಬಹಳ ಸಣ್ಣದು. ಹಾಗಾಗಿ ಈಗಾಗಲೇ ದೇಶದಲ್ಲಿ ಸಾಮುದಾಯಿಕ ಸೋಂಕು ಹರಡುವಿಕೆ ಪ್ರಾರಂಭವಾಗಿದೆಯೇ ಇಲ್ಲವೇ ಖಚಿತಪಡಿಸಲು ಅಸಾಧ್ಯ. ಆದುದರಿಂದ ಈ ಹಂತದಲ್ಲಿ ಸಿಗುತ್ತಿರುವ ಅಂದಾಜಿನ ಬಗ್ಗೆ ಖಚಿತವಾಗಿ ಹೇಳುವುದು ಅಸಾಧ್ಯ ಎಂದು ವರದಿ ತಿಳಿಸಿದೆ. 

ಸಧ್ಯಕ್ಕೆ ಸೋಂಕು ಹರಡದಂತೆ ತಡೆಯಲು ತಡೆಯಲು ಲಾಕ್ ಡೌನ್ ಕಡ್ಡಾಯವಾಗಿ ಅನುಸರಿಸುವುದು ಮಾತ್ರ ಇರುವ ಅತ್ಯುತ್ತಮ ದಾರಿ. ಸೋಂಕು ನಿಯಂತ್ರಣಕ್ಕೆ ಅನುಸರಿಸಿರುವ ಕಠಿಣ ಕ್ರಮಗಳು ಯಶಸ್ವಿಯಾದರೆ ವರದಿಯಲ್ಲಿ ಕಂಡುಬರುವ ಅಂದಾಜು ಸಂಖ್ಯೆ ಬದಲಾಗಲಿದೆ ಎಂದು ವರದಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News