ಭಾರತದ ಜಿಡಿಪಿ ಅಂದಾಜನ್ನು ಶೇ 5.3ರಿಂದ ಶೇ 2.5ಕ್ಕೆ ಇಳಿಸಿದ 'ಮೂಡೀಸ್'

Update: 2020-03-27 08:17 GMT

ಹೊಸದಿಲ್ಲಿ: ಈ ವರ್ಷ ಭಾರತದ ಆರ್ಥಿಕ ಪ್ರಗತಿ ಪ್ರಮಾಣದ ಅಂದಾಜನ್ನು ಮೂಡೀಸ್ ಇನ್ವೆಸ್ಟರ್ ಸರ್ವಿಸ್ ಈ ಹಿಂದಿನ ಶೇ 5.3ರಿಂದ  ಶೇ 2.5ಕ್ಕೆ ಇಳಿಸಿದೆ. ದೇಶದಲ್ಲಿ ಕೊರೋನ ವೈರಸ್ ಸಮಸ್ಯೆಯಿಂದ ಏರುತ್ತಿರುವ ಖರ್ಚುವೆಚ್ಚಗಳನ್ನು ಗಮನಿಸಿ ಸಂಸ್ಥೆ ಆರ್ಥಿಕ ಪ್ರಗತಿ ಅಂದಾಜನ್ನು ಕಡಿತಗೊಳಿಸಿದೆ.

ಮುಂದಿನ ವರ್ಷ ದೇಶದ ಆರ್ಥಿಕ ಪ್ರಗತಿ ಪ್ರಮಾಣ ಶೇ 5.8ಕ್ಕೆ ಏರಿಕೆಯಾಗಬಹುದು ಎಂದೂ ಮೂಡೀಸ್ ಹೇಳಿದೆ. ಆದರೆ ಈ ವರ್ಷ ಜಿಡಿಪಿ ಪ್ರಮಾಣ  ಶೇ 0.5ರಷ್ಟು ನೆಗೆಟಿವ್ ಆಗಬಹುದು ಎಂದೂ ಸಂಸ್ಥೆ ಅಂದಾಜಿಸಿದೆ.

 ಈ ವರ್ಷದ ಅಂದಾಜು ಪ್ರಗತಿ ಪ್ರಮಾಣವನ್ನು ಪರಿಗಣಿಸಿದಾಗ  ದೇಶದಲ್ಲಿ ಜನರ ಆದಾಯ ಗಣನೀಯವಾಗಿ ಕಡಿಮೆಗೊಳ್ಳುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.

ಸರಕಾರ ಈ ಹಿಂದೆ  ಆರ್ಥಿಕ ವರ್ಷ 2019-20ರಲ್ಲಿ ಜಿಡಿಪಿ ಪ್ರಮಾಣ ಶೇ 5ರಷ್ಟಾಗಬಹುದು ಎಂದು ಅಂದಾಜಿಸಿತ್ತು.  ಕಳೆದ ಆರ್ಥಿಕ ವರ್ಷದ ಅಂದಾಜು ಶೇ 6.1ರಷ್ಟಾಗಿತ್ತು. ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಪ್ರಗತಿ ಪ್ರಮಾಣ ಶೇ 4.7ರಷ್ಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News