ಹೋಮ್ ಕ್ಯಾರೆಂಟೈನ್ ವದಂತಿಯನ್ನು ತಳ್ಳಿ ಹಾಕಿದ ಕಮಲ್ ಹಾಸನ್

Update: 2020-03-28 09:26 GMT

ಚೆನ್ನೈ, ಮಾ.28: ಹೋಮ್ ಕ್ಯಾರೆಂಟೈನ್ ನಲ್ಲಿದ್ದಾರೆಂಬ ವದಂತಿಯನ್ನು ನಟ-ರಾಜಕಾರಣಿ ಕಮಲ್ ಹಾಸನ್  ತಳ್ಳಿ ಹಾಕಿದ್ದಾರೆ.

ಕಮಲ್ ಹಾಸನ್ ಅವರ ಮನೆಯ  ಆವರಣ ಗೋಡೆಗೆ ನಗರ ಪಾಲಿಕೆಯ   ಆರೋಗ್ಯ ಅಧಿಕಾರಿಗಳು  ಕ್ವಾರೆಂಟೈನ್ ನೋಟಿಸ್ ನ್ನು ಹಚ್ಚಿದ್ದರು. ಆ ಬಳಿಕ ಸಾಮಾಜಿಕ ಜಾಲಾ ತಾಣಗಳಲ್ಲಿ ಈ ವಿಚಾರ ವೈರಲ್ ಆಗಿತ್ತು

ಕಮಲ್ ಹಾಸನ್ ಅವರ ನಿವಾಸದ ಮುಂದೆ ಅಂಟಿಸಲಾದ ಕ್ವಾರೆಂಟೈನ್ ನೋಟಿಸ್ ನ  ಸ್ಟಿಕ್ಕರ್ ಫೋಟೋಗಳು ವೈರಲ್ ಆಗಿವೆ. ಆದರೆ, ಕಮಲ್ ಹಾಸನ್ ಅವರು  ಇದೀಗ  ಮತ್ತೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂ-ಪ್ರತ್ಯೇಕತೆಯನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ.

'ಹೋಮ್ ಕ್ಯಾರೆಂಟೈನ್' ನೋಟಿಸ್  ಹಚ್ಚಿದ ಕೆಲವೇ ಗಂಟೆಗಳ ನಂತರ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಅದನ್ನು  ತೆಗೆದು ಹಾಕಿದೆ. .

ಕೊರೊನಾವೈರಸ್ ಹರಡಿದ ವಿದೇಶಗಳಿಂದ ಹಿಂದಿರುಗಿದ ಎಲ್ಲರ ನಿವಾಸಗಳ ಹೊರಗೆ ಆರೋಗ್ಯ ಅಧಿಕಾರಿಗಳು ಇಂತಹ ನೋಟಿಸ್‌ಗಳನ್ನು ಅಂಟಿಸುತ್ತಿದ್ದಾರೆ.

"ಕಮಲ್ ಹಾಸನ್ ಈ ವರ್ಷದ ಜನವರಿಯಿಂದ ಭಾರತದಲ್ಲಿದ್ದಾರೆ. ಅವರು ವಿದೇಶ ಪ್ರವಾಸ ಮಾಡಿಲ್ಲ. ಕಟ್ಟಡವು ಈಗ ಮಕ್ಕಲ್ ನೀಧಿ ಮಾಯಂ (ಎಂಎನ್‌ಎಂ) ಅವರ ಪಕ್ಷದ ಕಚೇರಿಯಾಗಿದೆ. ಆದರೆ  ರಾತ್ರಿ ಹೊತ್ತಿಗೆ   ಕಮಲ್ ಹಾಸನ್ ಮನೆಗೆ ಆಗಮಿಸಿ ಅವರ ಮನೆಯ ಗೋಡೆಗೆ ಕ್ಯಾರೆಂಟೈನ್ ನೋಟಿಸ್ ಹಚ್ಚಿ ಹೋಗಿದ್ದಾರೆ "ಎಂದು ಪಕ್ಷದ ವಕ್ತಾರ ಮುರಳಿ ಅಪ್ಪಾಸ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು..

ಗ್ರೇಟರ್ ಚೆನ್ನೈ ಕಾರ್ಪೊರೇಶನ್‌ನ ಆಯುಕ್ತ ಜಿ.ಪ್ರಕಾಶ್, "ನಮ್ಮ ಸಿಬ್ಬಂದಿ ಕಮಲ್ ಹಾಸನ್ ಅವರ ನಿವಾಸದ ಆವರಣ ಗೋಡೆಗೆ ಕ್ವಾರೆಂಟೈನ್  ಸ್ಟಿಕ್ಕರ್ ಅಂಟಿಸಿದ್ದಾರೆ ಏಕೆಂದರೆ ಗೌತಮಿ (ಕಮಲ್ ಹಾಸನ್ ರ ಮಾಜಿ ಪಾಲುದಾರೆ) ಇತ್ತೀಚೆಗೆ ದುಬೈನಿಂದ ಹಿಂದಿರುಗಿದ್ದರು ಮತ್ತು ಅವರ ಪಾಸ್‌ಪೋರ್ಟ್‌ನಲ್ಲಿ  ಆ ಮನೆಯ  ವಿಳಾಸವಿದೆ."

ಎರಡು ದಿನಗಳ ಹಿಂದೆ ಕಮಲ್ ಹಾಸನ್ ಅವರು ವೈದ್ಯರ ಸಹಾಯದಿಂದ ಇದೇ ಮನೆಯನ್ನು ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ತಾತ್ಕಾಲಿಕ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಸಿದ್ದರಿರುವುದಾಗಿ ಟ್ವೇಟ್ ಮಾಡಿದ್ದರು. ಸರ್ಕಾರ ಅನುಮತಿ ನೀಡಿದ ನಂತರ ಮನೆಯನ್ನು ಆಸ್ಪತ್ರೆಯನ್ನಾಗಿ  ಮಾಡಲು ಸಿದ್ಧ ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News