ಇರಾನ್‌ನಿಂದ 275 ಭಾರತೀಯರ ಆಗಮನ

Update: 2020-03-29 16:57 GMT

ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ಇರಾನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ 275 ಮಂದಿ ಭಾರತೀಯರ ಇನ್ನೊಂದು ತಂಡವು ಇಂದು ವಿಶೇಷ ವಿಮಾನದ ಮೂಲಕ ಭಾರತ ತಲುಪಿದೆ. ರಾಜಸ್ಥಾನದ ಜೋಧ್‌ಪುರದಲ್ಲಿರುವ ವಾಯುಸೇನಾ ನೆಲೆಯಲ್ಲಿ ಬಂದಿಳಿದ ಅವರನ್ನು ಸೇನೆಯ ಆರೋಗ್ಯ ಕೇಂದ್ರದಲ್ಲಿರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಇರಾನ್‌ನಿಂದ ತೆರವುಗೊಳಿಸಲಾಗಿರುವ 277 ಮಂದಿ ಭಾರತೀಯರನ್ನು ಕೂಡಾ ಈ ಕೇಂದ್ರದಲ್ಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News