ಬ್ರಿಟನ್: 108 ವರ್ಷದ ಮಹಿಳೆ ಕೊರೋನವೈರಸ್‌ಗೆ ಬಲಿ

Update: 2020-03-29 17:18 GMT

ಲಂಡನ್, ಮಾ. 29: ಬ್ರಿಟನ್‌ನ 108 ವರ್ಷದ ಮಹಿಳೆಯೊಬ್ಬರು ಆ ದೇಶದಲ್ಲಿ ಕೊರೋನವೈರಸ್‌ಗೆ ಬಲಿಯಾದ ಅತಿ ಹಿರಿಯ ವ್ಯಕ್ತಿಯಾಗಿದ್ದಾರೆ.

ಎಪ್ರಿಲ್ 5ರಂದು ತನ್ನ ಹುಟ್ಟುಹಬ್ಬ ಆಚರಿಸಲಿದ್ದ ಹೀಲ್ಡಾ ಚರ್ಚಿಲ್‌ರಲ್ಲಿ ಮಾರಕ ಸಾಂಕ್ರಾಮಿಕದ ವೈರಸ್ ಇರುವುದು ದೃಢಪಟ್ಟ ಕೆಲವೇ ಗಂಟೆಗಳಲ್ಲಿ ಪ್ರಾಣ ಕಳೆದುಕೊಂಡರು. ಅವರು 1918ರ ಸ್ಪೇನ್‌ನ ಫ್ಲೂ ಸಾಂಕ್ರಾಮಿಕ ಮತ್ತು ಎರಡು ಮಹಾಯುದ್ಧಗಳನ್ನು ನೋಡಿದ್ದಾರೆ.

ಅವರು ಮಂಗಳವಾರ ರೋಗದ ಲಘು ಲಕ್ಷಣಗಳಣನ್ನು ತೋರಿಸಲು ಆರಂಭಿಸಿದರು. ಶನಿವಾರ ಸ್ಯಾಲ್ಫರ್ಡ್ ನಗರದಲ್ಲಿರುವ ತನ್ನ ಆರೈಕೆ ಮನೆಯಲ್ಲಿ ಅವರು ಕೊನೆಯುಸಿರೆಳೆದರು ಎಂದು ‘ಸನ್’ ಪತ್ರಿಕೆ ವರದಿ ಮಾಡಿದೆ.

ಬ್ರಿಟನ್‌ನಲ್ಲಿ ಈವರೆಗೆ ನೋವೆಲ್-ಕೊರೋನವೈರಸ್ ಸಾಂಕ್ರಾಮಿಕಕ್ಕೆ 1,000ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ ಹಾಗೂ 17,000ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

1918ರಲ್ಲಿ ಜಗತ್ತಿನಾದ್ಯಂತ ಹರಡಿದ ಸ್ಪಾನಿಶ್ ಜ್ವರಕ್ಕೆ ಹೀಲ್ಡಾರ 12 ತಿಂಗಳ ಸಹೋದರಿ ಬಲಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News