ಲಾಕ್ ಡೌನ್ ಹಿನ್ನಲೆ: ವಾಹನ ಚಾಲನೆ ಪರವಾನಿಗೆ, ಪರ್ಮಿಟ್ ಕೊನೆಯ ದಿನಾಂಕ ವಿಸ್ತರಣೆ

Update: 2020-03-31 07:54 GMT

ಹೊಸದಿಲ್ಲಿ: ಫೆಬ್ರವರಿ 1ರಂದು ಅವಧಿ ಪೂರ್ಣಗೊಂಡ ವಾಹನ ಚಾಲನಾ ಪರವಾನಗಿ ಹಾಗೂ ಇತರ ವಾಹನ ಸಂಬಂಧಿ ದಾಖಲೆಗಳು ಜೂನ್ 30ರ ತನಕ ಊರ್ಜಿತದಲ್ಲಿರುತ್ತವೆ ಎಂದು ಕೇಂದ್ರ ಹೇಳಿದೆ. ದೇಶಾದ್ಯಂತ ಕಳೆದ ವಾರ ಆರಂಭಗೊಂಡ 21 ದಿನಗಳ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ಸೂಚನೆ ಬಂದಿದೆ.

ವಾಹನ ಚಾಲನಾ ಪರವಾನಗಿ, ಪರ್ಮಿಟ್ ಹಾಗೂ ಇತರ ನೋಂದಣಿ ದಾಖಲೆಗಳನ್ನು ಜೂನ್ 30ರ ತನಕ ಊರ್ಜಿತದಲ್ಲಿದೆ ಎಂದು ಪರಿಗಣಿಸುವಂತೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ.

ವಾಹನ ಸಂಬಂಧಿ ದಾಖಲೆಗಳ ನವೀಕರಣಕ್ಕೆ ಲಾಕ್ ಡೌನ್‍ ನಿಂದಾಗಿ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಅನುಕೂಲವಾಗುಂತೆ ಸರಕಾರ ಈ  ಸೂಚನೆ ನೀಡಿದೆ. ಕೇಂದ್ರದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ರಾಜ್ಯಗಳಿಗೆ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News