ಕಾಲಿಗೆ ಗಂಭೀರ ಗಾಯವಾಗಿದ್ದರೂ ಪ್ಲಾಸ್ಟರ್ ತೆಗೆದು ಮನೆಯತ್ತ ಹೊರಟ ವಲಸಿಗ ಕಾರ್ಮಿಕನ ಫೋಟೊ ವೈರಲ್

Update: 2020-03-31 08:42 GMT

ಹೊಸದಿಲ್ಲಿ, ಮಾ.31: ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಆದ ಬಳಿಕ ವಲಸಿಗ ಕಾರ್ಮಿಕರು ತಮ್ಮ ಹಳ್ಳಿಗೆ ವಾಪಸಾಗಲು ಕಾಲ್ನಡಿಗೆ ಆರಂಭಿಸಿದ್ದು, ಭನ್ವರ್‌ಲಾಲ್ ಎಂಬ ವಲಸಿಗ ಕಾರ್ಮಿಕನ ಫೋಟೊ ಇಂಟರ್‌ನೆಟ್‌ನಲ್ಲಿ ವೈರಲ್  ಆಗಿದೆ.

ಮಧ್ಯಪ್ರದೇಶದ ಪಿಪಾರಿಯ ಪಟ್ಟಣದಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾಗಲೇ ಭನ್ವರ್‌ಲಾಲ್ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಹೀಗಾಗಿ ಅವರ ಕಾಲಿಗೆ ಪ್ಲಾಸ್ಟರ್ ಹಾಕಲಾಗಿತ್ತು.

"ನಾನು 500 ಕಿ.ಮೀ. ವಾಹನದಲ್ಲಿ ಬಂದಿದ್ದೇನೆ. ನನ್ನ ಕುಟುಂಬ ಹಾಗೂ ತವರು ಪಟ್ಟಣ ತಲುಪದೆ ಹತಾಶನಾಗಿದ್ದೇನೆ. ಹೀಗಾಗಿ 240 ಕಿ.ಮೀ. ದೂರದಲ್ಲಿರುವ ರಾಜಸ್ಥಾನದಲ್ಲಿರುವ ತನ್ನ ಹಳ್ಳಿಯನ್ನು ತಲುಪಲು ಕಾಲ್ನಡಿಗೆ ಆರಂಭಿಸಲು ನಿರ್ಧರಿಸಿದೆ. ಗಡಿಯಲ್ಲಿ ಪೊಲಿಸರು ನನ್ನನ್ನು ತಡೆಯುತ್ತಾರೆಂದು ಗೊತ್ತಿತ್ತು. ಆದರೆ ನನಗೆ ಬೇರೆ ದಾರಿಯಿಲ್ಲ. ನನ್ನ ಕುಟುಂಬ ಒಂಟಿಯಾಗಿದೆ. ನನಗೆ ಕೈಯಲ್ಲಿ ಕೆಲಸವಿಲ್ಲ. ಮನೆಗೆ ಹಣ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಕಾಲಿಗೆ ಹಾಕಿರುವ ಪ್ಲಾಸ್ಟರ್‌ನ್ನು ಕತ್ತರಿಯಲ್ಲಿ ಕತ್ತರಿಸಿ ನಡೆಯಲು ನಿರ್ಧರಿಸಿದೆ'' ಎಂದು ಭನ್ವರ್‌ಲಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News