ವಲಸೆ ಕಾರ್ಮಿಕರಿಗೆ ಆಹಾರ, ವೈದ್ಯಕೀಯ ವ್ಯವಸ್ಥೆ ಮಾಡಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2020-03-31 08:54 GMT

ಹೊಸದಿಲ್ಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಕಂಗಾಲಾಗಿರುವ ವಲಸೆ ಕಾರ್ಮಿಕರಿಗೆ ಆಹಾರ, ವೈದ್ಯಕೀಯ ಸೌಲಭ್ಯಗಳು ಮತ್ತು ಎಲ್ಲಾ ಧರ್ಮಗಳ ನಾಯಕರಿಂದ ಕೌನ್ಸೆಲಿಂಗ್ ವ್ಯವಸ್ಥೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.

"ನೀವು ಯಾರ ವಲಸೆ ತಡೆದಿದ್ದೀರೋ ಅವರಿಗೆ ಆಹಾರ, ವಸತಿ, ವೈದ್ಯಕೀಯ ಸೇವೆಯ ವ್ಯವಸ್ಥೆ ಮಾಡುವುದಾಗಿ ಖಾತರಿಪಡಿಸಿ" ಎಂದು ಸಿಜೆಐ ಎಸ್.ಎ. ಬೊಬ್ಡೆ ಕೇಂದ್ರ ಸರಕಾರಕ್ಕೆ ಹೇಳಿದರು.

"ವೈರಸ್ ಗಿಂತಲೂ ಭೀತಿಯು ಹೆಚ್ಚಿನ ಪ್ರಾಣಕ್ಕೆ ಕುತ್ತು ತರಲಿದೆ. ಕೌನ್ಸಿಲಿಂಗ್ ಬೇಕಾಗಿದೆ. ನೀವು ಭಜನೆ, ಕೀರ್ತನೆ, ನಮಾಝ್ ಅಥವಾ ಏನೇ ಆಗಲಿ ವ್ಯವಸ್ಥೆ ಮಾಡಿ. ನೀವು ಜನರಿಗೆ ಧೈರ್ಯ ತುಂಬಬೇಕು" ಎಂದು ನ್ಯಾಯಾಲಯವು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News