ಜಗ್ಗಿ ವಾಸುದೇವ್ ರ ಇಶಾ ಫೌಂಡೇಶನ್ ನಲ್ಲಿ 150 ವಿದೇಶಿಯರು ಕ್ವಾರಂಟೈನ್ ನಲ್ಲಿ

Update: 2020-04-02 12:11 GMT

ಕೊಯಮತ್ತೂರು: ಫೆಬ್ರವರಿ 21ರ ಶಿವರಾತ್ರಿ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದ ಸುಮಾರು 150 ವಿದೇಶಿಯರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ನಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ ಎಂದು thehindu.com ವರದಿ ಮಾಡಿದೆ.

ಫೆಬ್ರವರಿ 15ರ ನಂತರ ಭಾರತಕ್ಕೆ ಆಗಮಿಸಿದ ವಿದೇಶಿಯರ ಬಗ್ಗೆ ಸರಕಾರವು ಮಾಹಿತಿ ಕಲೆ ಹಾಕುತ್ತಿದೆ ಎಂದು ಆರೋಗ್ಯ ಕಾರ್ಯದರ್ಶಿ ಬೀಲಾ ರಾಜೇಶ್ ಮಾಹಿತಿ ನೀಡಿದ್ದು, ಈ ಪಟ್ಟಿಯಲ್ಲಿ ಇಶಾ ಫೌಂಡೇಶನ್ ನಲ್ಲಿರುವ ವಿದೇಶಿಯರೂ ಸೇರಿದ್ದಾರೆ.

ಸರಕಾರದ ಅಧಿಸೂಚನೆಗೂ ಮೊದಲೇ ವಿದೇಶಿಯರು ಇಲ್ಲಿಗೆ ಆಗಮಿಸಿದ್ದರು ಎಂದು ಕೊಯಮತ್ತೂರು ಜಿಲ್ಲಾಡಳಿತ ಮಾಹಿತಿ ನೀಡಿದ್ದು, ಅವರೆಲ್ಲರೂ ಇಶಾ ಯೋಗ ಕ್ಯಾಂಪಸ್ ನಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ ಮತ್ತು ಆರೋಗ್ಯ ಇಲಾಖೆಯು ತಪಾಸಣೆ ನಡೆಸಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News