ಕೊರೋನ ವೈರಸ್ ಶಂಕಿತರ ಪತ್ತೆಗೆ ಡ್ರೋನ್

Update: 2020-04-03 18:03 GMT

ಹೊಸದಿಲ್ಲಿ, ಎ.3: ಗುವಾಹಟಿ ಐಟಿಐಯ ಮೂವರು ಹಳೆಯ ವಿದ್ಯಾರ್ಥಿಗಳು ಕೊರೊನ ವೈರಸ್ ಶಂಕಿತರನ್ನು ಪತ್ತೆಹಚ್ಚುವ ಡ್ರೋನ್ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

 ಇನ್‌ಫ್ರಾರೆಡ್ ಕ್ಯಾಮೆರಗಳನ್ನು ಹೊಂದಿರುವ ಈ ಡ್ರೋನ್‌ಗಳಿಂದ ಕೊರೊನ ವೈರಸ್ ಸೋಂಕಿತರನ್ನು ಮನುಷ್ಯರ ನೆರವಿಲ್ಲದೆಯೇ ಪತ್ತೆಹಚ್ಚಲು ಸಾಧ್ಯ. ಇದರಲ್ಲಿ ಲೌಡ್‌ಸ್ಪೀಕರ್ ಕೂಡಾ ಇದ್ದು ಈ ಮೂಲಕ ಅತೀ ಹೆಚ್ಚು ಕೊರೊನ ಸೋಂಕಿತರಿರುವ ಪ್ರದೇಶದ ಜನರಿಗೆ ಸೂಕ್ತ ನಿರ್ದೇಶನ ನೀಡಬಹುದಾಗಿದೆ.

 ಮಾರುತ್ ಡ್ರೋನ್‌ಟೆಕ್ ಎಂಬ ಹೆಸರಿನ ಈ ಡ್ರೋನ್‌ಗಳ ಪರೀಕ್ಷಾ ಹಾರಾಟವನ್ನು ಈಗಾಗಲೇ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರಕಾರಗಳ ಹಾಗೂ ತಿರುಚಿ ನಗರಪಾಲಿಕೆ ಅಧಿಕಾರಿಗಳ ಸಹಯೋಗದಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ . ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಜನತೆ ಒಂದೆಡೆ ಗುಂಪು ಸೇರಲು ಆರಂಭಿಸುತ್ತಾರೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮದ ಪರಿಪಾಲನೆಗೆ ತೊಡಕಾಗುತ್ತದೆ. ಆದ್ದರಿಂದ ವೈರಸ್ ಹರಡುವ ಅಪಾಯ ಹೆಚ್ಚಿರುತ್ತದೆ . ಇನ್‌ಫ್ರಾರೆಡ್ ಕ್ಯಾಮೆರಾಗಳ ನೆರವಿನಿಂದ ಮನುಷ್ಯರ ದೇಹದ ಉಷ್ಣಾಂಶವನ್ನು ದೂರದಿಂದಲೇ ತಪಾಸಣೆ ಮಾಡಬಹುದು . ಇದರಲ್ಲಿ ದೊರೆತ ಮಾಹಿತಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ರವಾನಿಸಬಹುದು ಎಂದು ಡ್ರೋನ್ ರೂಪಿಸಿದ ತಂಡದ ಸದಸ್ಯನಾಗಿರುವ ಪ್ರೇಮ್‌ಕುಮಾರ್ ವಿಸ್ಲಾವತ್ ಹೇಳಿದ್ದಾರೆ. ಸೂರಜ್ ಪೆಡ್ಡಿ ಮತ್ತು ಸಾಯ್‌ಕುಮಾರ್ ಚಿಂತಾಲ ಡ್ರೋನ್ ರೂಪಿಸಿದ ತಂಡದಲ್ಲಿರುವ ಇನ್ನಿಬ್ಬರು ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News