ಕೋರೋನ: ಕ್ವಾರಂಟೈನ್ ಗಾಗಿ 4 ಅಂತಸ್ತಿನ ಕಚೇರಿ ನೀಡಿದ ಶಾರುಖ್ ಖಾನ್-ಗೌರಿ ದಂಪತಿ

Update: 2020-04-04 11:31 GMT

ಮುಂಬೈ: ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಹಾಗೂ ಕ್ವಾರಂಟೈನ್ ಸೌಲಭ್ಯ ಮತ್ತು ಅಗತ್ಯ ವಸ್ತುಗಳ ಶೇಖರಣೆಗೆ ಸಹಾಯಕವಾಗಲು ತಮ್ಮ ನಾಲ್ಕಂತಸ್ತಿನ ವೈಯಕ್ತಿಕ ಕಚೇರಿ ಕಟ್ಟಡವನ್ನು ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಶನ್‍ ಗೆ ಬಿಟ್ಟುಕೊಡಲು ಶಾರುಖ್ ಖಾನ್, ಅವರ ಪತ್ನಿ ಗೌರಿ ಖಾನ್ ಮುಂದೆ ಬಂದಿದ್ದಾರೆ.

ಬಾಲಿವುಡ್ ನಟನ ಕುಟುಂಬದ ಈ ನಡೆಗೆ  ಬಿಎಂಸಿ ಧನ್ಯವಾದ ತಿಳಿಸಿದೆ. ಈ ಕುರಿತಂತೆ ಬಿಎಂಸಿ ಟ್ವೀಟ್ ಕೂಡ ಮಾಡಿ ಶಾರುಖ್ ದಂಪತಿಯ ಕೊಡುಗೆಯನ್ನು ಶ್ಲಾಘಿಸಿದೆ.

ಶಾರುಖ್ ಅವರು ಈಗಾಗಲೇ ಪಿಎಂ-ಕೇರ್ಸ್ ಫಂಡ್ ಹಾಗೂ ಮಹಾರಾಷ್ಟ್ರ, ದಿಲ್ಲಿ, ಪಶ್ಚಿಮ ಬಂಗಾಳ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿ ಹಾಗೂ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಹಲವು ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಸಚಿವ ಆದಿತ್ಯ ಠಾಕ್ರೆ ಕೂಡ ಶಾರುಖ್‍ ಗೆ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಸಿಎಂ ಉದ್ಧವ್ ಠಾಕ್ರೆಗೆ ಹೃದಯಸ್ಪರ್ಶಿ ಉತ್ತರ ನೀಡಿರುವ ಶಾರುಖ್, "ನಾವೆಲ್ಲರೂ ಒಂದೇ ಕುಟುಂಬ ಸರ್, ನಾವು ಪರಸ್ಪರ ಆರೋಗ್ಯವಂತರಾಗಲು ಜತೆಯಾಗಿ ಶ್ರಮಿಸಬೇಕು'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News