ಕೊರೋನಾಗೆ ಅಮೆರಿಕ ತತ್ತರ: 24 ತಾಸುಗಳಲ್ಲಿ 1400ಕ್ಕೂ ಅಧಿಕ ಬಲಿ

Update: 2020-04-04 17:56 GMT

ವಾಶಿಂಗ್ಟನ್, ಮಾ.22: ಅಮೆರಿಕದಲ್ಲಿ ಕೊರೋನ ವೈರಸ್ ನ ರುದ್ರನರ್ತನ ಅವ್ಯಾಹತವಾಗಿ ಮುಂದುವರಿದಿದ್ದು, ಗುರುವಾರ ಹಾಗೂ ಶುಕ್ರವಾರದ ನಡುವೆ ಸುಮಾರು 1400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದು ಇದು 24 ತಾಸುಗಳ ಅವಧಿಯಲ್ಲಿ ಕೊರೋನ ವೈರಸ್‌ಗೆ ಬಲಿಯಾದವರ ಗರಿಷ್ಠ ಸಂಖ್ಯೆಯಾಗಿದೆ.

ಗುರುವಾರ ಹಾಗೂ ಶುಕ್ರವಾರದ ಮಧ್ಯೆ ಅಮೆರಿಕದಲ್ಲಿ ಕೊರೋನ ಸೋಂಕಿಗೆ 1406 ಮಂದಿ ಮೃತಪಟ್ಟಿದ್ದಾರೆ ಎಂದು ಜಾನ್‌ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ಶುಕ್ರವಾರ ವರದಿ ಮಾಡಿದೆ. ಅಮೆರಿಕದಲ್ಲಿ ಸುಮಾರು 2,45,500 ಮಂದಿ ಈ ಭೀಕರ ಸೋಂಕುರೋಗದಿಂದ ಬಾಧಿತರಾಗಿದ್ದಾರೆ.

ಅಮೆರಿಕದಲ್ಲಿ ಕೊರೋನ ಸೋಂಕಿಗೆ ಬಲಿಯಾದವ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವಂತೆಯೇ, ಆರ್ಥಿಕತೆಯ ಕುಸಿತದ ಜೊತೆಗೆ ನಿರುದ್ಯೋಗ ಸಮಸ್ಯೆಯೂ ಕಾಡಲಾರಂಭಿಸಿದೆ. ಕೇವಲ ಎರಡು ವಾರಗಲ್ಲಿ 1 ಕೋಟಿಗೂ ಅಧಿಕ ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದಾರೆಂದು ವರದಿಯೊಂದು ತಿಳಿಸಿದೆ.

ಕೊರೋನ ವೈರಸ್ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಹೇರ ಲಾಗಿರುವಲಾಕ್‌ಡೌನ್‌ನಿಂದಾಗಿ ಶೇ90ರಷ್ಟು ಅಮೆರಿಕದ ಜನತೆ ಮನೆಯೊಳಗೆ ಉಳಿದುಕೊಳ್ಳುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News