×
Ad

ಜಾತಿ,ಮತ,ಧರ್ಮ ಬದಿಗಿಟ್ಟು ಕೊರೋನ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು: ಜಗನ್

Update: 2020-04-05 11:03 IST

ಹೈದರಾಬಾದ್,ಎ.5: ದಿಲ್ಲಿಯ ನಿಝಾಮುದ್ದೀನ್‌ನ ತಬ್ಲೀಗಿ ಜಮಾಅತ್ ಸಮಾವೇಶದಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನ ಸಂಖ್ಯೆಯ ಕೊರೋನ ವೈರಸ್ ಪ್ರಕರಣ ಬೆಳಕಿಗೆ ಬರುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ, ಜನತೆಯು ಜಾತಿ, ಮತ ಧರ್ಮವನ್ನು ಬದಿಗಿಟ್ಟು ಕೋವಿಡ್-19 ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕೆಂದು ಎಂದು ಒತ್ತಾಯಿಸಿದರು.

 ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ನೀಡಿರುವ ಕರೆಯಂತೆ ರವಿವಾರ ರಾತ್ರಿ 9 ಗಂಟೆಗೆ ದೀಪವನ್ನು ಬೆಳಗಿಸಬೇಕು ಎಂದು ಕೋರಿಕೊಂಡರು.

ನಮ್ಮ ರಾಜ್ಯದ ಕೆಲವು ಜನರು ದಿಲ್ಲಿಯಲ್ಲಿ ಧಾರ್ಮಿಕ ಸಮಾವೇಶಕ್ಕೆ ತೆರಳಿದ್ದರು. ಆ ಸಮಾವೇಶದಲ್ಲಿ ವಿದೇಶ ರಾಷ್ಟ್ರದಿಂದಲೂ ಸದಸ್ಯರು ಬಂದಿದ್ದರು. ಕೆಲವರು ವೈರಸ್ ಸೋಂಕಿಗೆ ಒಳಗಾಗಿದ್ದು, ಅಲ್ಲಿಂದ ವೈರಸ್ ಹರಡಿದೆ. ಆದರೆ, ವೈರಸ್ ಹರಡುವಿಕೆಗೆ ಒಂದು ನಿರ್ದಿಷ್ಟ ಸಮುದಾಯವನ್ನು ಹೊಣೆಯಾಗಿಸುವುದಕ್ಕೆ ಯಾವುದೇ ಕಾರಣವಿಲ್ಲ ಎಂದರು.

ದಿಲ್ಲಿಯಲ್ಲಿ ದುರದೃಷ್ಟಕರ ಘಟನೆಯೊಂದು ನಡೆದುಹೋಗಿದೆ. ಇದು ಎಲ್ಲಿ ಕೂಡ ನಡೆಯಬಹುದು. ಉದ್ದೇಶಪೂರ್ವಕವಾಗಿ ವೈರಸ್ ಹರಡದೇ ಇರುವ ಕಾರಣ ಬೇಧಭಾವ ಮಾಡುವುದಕ್ಕೂ ಯಾವುದೇ ಕಾರಣವಿಲ್ಲ ಎಂದು ರೆಡ್ಡಿ ಆಂಧ್ರ ಜನತೆಯ ಉದ್ದೇಶಿಸಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News