ಮೂವರು ಏರ್ ಇಂಡಿಯಾ ಪ್ರಯಾಣಿಕರಿಗೆ ಕೋವಿಡ್-19 ಸೋಂಕು
Update: 2020-04-05 11:55 IST
ಹೊಸದಿಲ್ಲಿ,ಎ.5: ಮೂರು ಪ್ರತ್ಯೇಕ ವಿಮಾನದಲ್ಲಿ ಪ್ರಯಾಣಿಸಿದ್ದ ತನ್ನ ಮೂವರು ಪ್ರಯಾಣಿಕರಿಗೆ ಕೋವಿಡ್-19 ಸೋಂಕು ತಗಲಿದೆ ಎಂದು ಏರ್ ಇಂಡಿಯಾ ರವಿವಾರ ಟ್ವಿಟರ್‌ನ ಮೂಲಕ ತಿಳಿಸಿದೆ.
ಮಾ.19ರಂದು ಮುಂಬೈನಿಂದ ಗೋವಾಕ್ಕೆ ಹಾರಾಟ ನಡೆಸಿದ್ದ ಎಐ 661 ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬನಿಗೆ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.
ಮಾ.22ರಂದು ಮುಂಬೈನಿಂದ ಗೋವಾಕ್ಕೆ ಹಾರಾಟ ನಡೆಸಿದ್ದ ಎಐ 883 ವಿಮಾನದಲ್ಲಿದ್ದ ಪ್ರಯಾಣಿಕನಿಗೆ ಕೊರೋನ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಮಾ.20ರಂದು ಮುಂಬೈನಿಂದ ದಿಲ್ಲಿಗೆ ಹಾರಾಟ ನಡೆಸಿದ್ದ ಎಐ 101 ವಿಮಾನ ಹಾಗೂ ಮಾ.23ರಂದು ದಿಲ್ಲಿಯಿಂದ ಪಾಟ್ನಾಕ್ಕೆ ಹಾರಾಟ ನಡೆಸಿದ್ದ ಎಐ 415 ವಿಮಾನವನ್ನೂ ಏರಿದ್ದ ಪ್ರಯಾಣಿಕನೊಬ್ಬನಿಗೆ ಕೋವಿಡ್-19ರ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಏರ್ ಇಂಡಿಯಾ ತಿಳಿಸಿದೆ.