×
Ad

ಮಲೇರಿಯಾ ಔಷಧ ಪೂರೈಸುವಂತೆ ಪ್ರಧಾನಿ ಮೋದಿಗೆ ಡೊನಾಲ್ಡ್ ಟ್ರಂಪ್ ಮನವಿ

Update: 2020-04-05 13:04 IST

ವಾಷಿಂಗ್ಟನ್,ಎ.5: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಮಲೇರಿಯಾ ವಿರೋಧಿ ಔಷಧ ಹೈಡ್ರೊಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಸರಬರಾಜು ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸಿದ್ದಾರೆ.

   ಭಾರತ ಪ್ರಧಾನಿ ನರೇಂದ್ರ ಮೋದಿಯವರ ಜತೆ ಇಂದು ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಳಿಕ , ಇನ್ನಷ್ಟು ಹೈಡ್ರೊಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಸರಬರಾಜು ಮಾಡುವಂತೆ ಮನವಿ ಮಾಡಿದ್ದು, ಮಾತ್ರೆಗಳ ಸರಬರಾಜಿಗೆ ನಾವು ಮಾಡಿರುವ ಆದೇಶದ ಮೇಲಿನ ತಡೆ ತೆರವುಗೊಳಿಸುವುದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ ಎಂದು ವೈಟ್‌ಹೌಸ್‌ನಲ್ಲಿ ಕೊರೋನ ವೈರಸ್ ಟಾಸ್ಕ್ ಫೋರ್ಸ್‌ಗೆ ಸಂಬಂಧಿಸಿ ಮಾತನಾಡುತ್ತಾ ಸುದ್ದಿಗಾರರಿಗೆ ತಿಳಿಸಿದರು.

 ನಾನು ನನ್ನ ವೈದ್ಯರ ಸಲಹೆಯ ಬಳಿಕ ಹೈಡ್ರೊಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಸೇವಿಸುವೆ.ಭಾರತ ಹೈಡ್ರೊಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಬಹಳಷ್ಟು ತಯಾರಿಸುತ್ತದೆ.ಅಲ್ಲಿನ ಕೋಟ್ಯಂತರ ಜನರಿಗೆ ಇದರ ಅಗತ್ಯವಿದೆ. ಮಲೇರಿಯಾ ವಿರೋಧಿ ಔಷಧಿ ಹೈಡ್ರೊಕ್ಸಿಕ್ಲೋರೊಕ್ವಿನ್ ಮಾತ್ರೆಯನ್ನು ಸ್ಟ್ರಾಟೆಜಿಕ್ ನ್ಯಾಶನಲ್ ಸ್ಟಾಕ್‌ಪೈಲ್‌ಮೂಲಕ ಚಿಕಿತ್ಸೆಗಾಗಿ ಬಿಡುಗಡೆ ಮಾಡಲಾಗುತ್ತದೆ. ನಾವು ಕೇಳಿದಷ್ಟು ಮಾತ್ರೆಗಳನ್ನು ಬಿಡುಗಡೆ ಮಾಡಿದರೆ ನಾನು ಅವರನ್ನು ಪ್ರಶಂಸಿಸುವೆ ಎಂದು ಟ್ರಂಪ್ ಹೇಳಿದ್ದಾರೆ.

ಭಾರತ ಸರಕಾರ ಮಲೇರಿಯಾ ವಿರೋಧಿ ಔಷಧ ಹೈಡ್ರೊಕ್ಸಿಕ್ಲೋರೊಕ್ವಿನ್ ಹಾಗೂ ಅದರ ಸೂತ್ರಗಳ ರಫ್ತನ್ನು ತಡೆ ಹಿಡಿದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ದೂರವಾಣಿ ಮಾತುಕತೆ ನಡೆಸಿದ್ದು ನಾವಿಬ್ಬರೂ ಉತ್ತಮ ಚರ್ಚೆ ನಡೆಸಿದ್ದೇವೆ.ಕೋವಿಡ್-19ರ ವಿರುದ್ಧ ಹೋರಾಡಲು ಭಾರತ-ಅಮೆರಿಕ ಸಂಪೂರ್ಣ ಶಕ್ತಿಯನ್ನು ಬಳಸಲು ಒಪ್ಪಿಕೊಂಡಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News