ಹಣತೆ ಹಚ್ಚುವ ಬದಲು ಗುಂಡು ಹಾರಿಸಿದ ಬಿಜೆಪಿ ನಾಯಕಿ: ಪ್ರಕರಣ ದಾಖಲು

Update: 2020-04-06 11:14 GMT

ಲಕ್ನೋ: ಎಲ್ಲರೂ ವಿದ್ಯುತ್ ದೀಪಗಳನ್ನು ಆರಿಸಿ ಹಣತೆ ಅಥವಾ ಮೋಂಬತ್ತಿ ಬೆಳಗಿಸಿ ಕೊರೋನ ವಿರುದ್ಧದ ಹೋರಾಟದಲ್ಲಿ ತಾವು ಒಂದಾಗಿದ್ದೇವೆ ಎಂಬ ಸಂದೇಶ ಸಾರುವಂತೆ ಪ್ರಧಾನಿ ಕರೆ ನೀಡಿದ್ದರೆ, ಇತ್ತ ಉತ್ತರ ಪ್ರದೇಶದ ಬಲರಾಮಪುರ್ ಎಂಬಲ್ಲಿನ ಬಿಜೆಪಿ ನಾಯಕಿ ಮಂಜು ತಿವಾರಿ ತಮ್ಮ ರಿವಾಲ್ವರಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ವಿವಾದಕ್ಕೀಡಾಗಿದ್ದಾರೆ.

ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿರುವ ತಿವಾರಿ ವಿಡಿಯೋದಲ್ಲಿ ತನ್ನ ರಿವಾಲ್ವರನ್ನು ಆಗಸದತ್ತ ಗುರಿಯಾಗಿಸಿ ಗುಂಡು ಹಾರಿಸುತ್ತಿದ್ದರೆ ಆಕೆಯ ಕುಟುಂಬದ ವ್ಯಕ್ತಿಯೊಬ್ಬ ಆಕೆಯನ್ನು ಹುರಿದುಂಬಿಸುತ್ತಿರುವುದು ಕಾಣಿಸುತ್ತದೆ.

ಈ ಕೃತ್ಯದ ವಿರುದ್ಧ ಎಲ್ಲೆಡೆ ಆಕ್ರೋಶ ಮೂಡುತ್ತಿದ್ದಂತೆಯೇ ಆಕೆಯ ವಿರುದ್ಧ ಐಪಿಸಿಯ ಸೆಕ್ಷನ್ 286 ಹಾಗೂ  ಶಸ್ತ್ರಾಸ್ತ್ರ ಕಾಯಿದೆ 1959 ಇದರ ಸೆಕ್ಷನ್ 30ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News