ಮೊಂಬತ್ತಿ ಹಿಡಿದು ರಸ್ತೆಗಿಳಿದು ಲಾಕ್‌ಡೌನ್ ಉಲ್ಲಂಘನೆ: 40 ಜನರ ವಿರುದ್ಧ ಪ್ರಕರಣ ದಾಖಲು

Update: 2020-04-07 16:16 GMT
ಸಾಂದರ್ಭಿಕ ಚಿತ್ರ

ಲಕ್ನೊ, ಎ.7: ಎಪ್ರಿಲ್ 5ರಂದು ರಾತ್ರಿ ತಮ್ಮ ತಮ್ಮ ಮನೆಯಲ್ಲೇ ದೀಪ ಬೆಳಗಿಸಬೇಕು ಎಂಬ ಪ್ರಧಾನಿಯ ಕರೆಯ ಹಿನ್ನೆಲೆಯಲ್ಲಿ, ಮೊಂಬತ್ತಿ ಹಿಡಿದು ರಸ್ತೆಗಿಳಿದು ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಿದ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ 40 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

 ದೇಶದೆಲ್ಲೆಡೆ ಜನತೆ ಮಣ್ಣಿನ ಹಣತೆ ಮತ್ತು ಕ್ಯಾಂಡಲ್ ಬೆಳಗಿದ್ದರೆ ಬರ್ಲಾಂಪುರ ಜಿಲ್ಲೆಯ ತುಳಸೀಪುರ ಬಝಾರ್ ಪ್ರದೇಶದಲ್ಲಿ ಕೆಲವರು ಮೋಂಬತ್ತಿ ದೀಪ ಹಿಡಿದು ಗುಂಪಾಗಿ ರಸ್ತೆಯಲ್ಲಿ ಸಾಗಿದ್ದಾರೆ. ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ 40 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಸರಕಾರದ ಆದೇಶವನ್ನು ಮೀರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಅರವಿಂದ್ ಕುಮಾರ್ ಮಿಶ್ರಾ ಹೇಳಿದ್ದಾರೆ.

ಎಪ್ರಿಲ್ 5 ರ ರಾತ್ರಿ ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪದಲ್ಲಿ ಬಲರಾಂಪುರ ಜಿಲ್ಲಾ ಬಿಜೆಪಿ ಮಹಿಳಾಮೋರ್ಛಾದ ಅಧ್ಯಕ್ಷೆ ಮಂಜು ತಿವಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News