ದೇಶದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರಲ್ಲಿ: 60 ವರ್ಷ ಮೀರಿದವರ ಪ್ರಮಾಣ 63%

Update: 2020-04-07 17:55 GMT

ಹೊಸದಿಲ್ಲಿ, ಎ.7: ದೇಶದಲ್ಲಿ ಕೊರೋನ ಸೋಂಕಿತರಲ್ಲಿ ಕೇವಲ 19% ಜನ ಮಾತ್ರ 60 ವರ್ಷ ಮೀರಿದವರು. ಆದರೆ ಕೊರೋನಕ್ಕೆ ಬಲಿಯಾದವರಲ್ಲಿ 60ವರ್ಷ ಮೀರಿದವರ ಪ್ರಮಾಣ 63%ದಷ್ಟು ಆಗಿದೆ ಎಂದು ಸರಕಾರ ಮಾಹಿತಿ ನೀಡಿದೆ.

ಕೊರೋನದಿಂದ ಮೃತಪಟ್ಟವರಲ್ಲಿ 40ರಿಂದ 60 ವರ್ಷ ವಯೋಮಿತಿಯವರ ಪ್ರಮಾಣ 30%, 40ಕ್ಕಿಂತ ಕೆಳಹರೆಯದವರ ಪ್ರಮಾಣ ಕೇವಲ 7% ಆಗಿದೆ. ಮೃತರಲ್ಲಿ 83%ದಷ್ಟು ಜನರು ಮಧುಮೇಹ, ಹೃದಯ ಮತ್ತು ಕಿಡ್ನಿಗೆ ಸಂಬಂಧಿಸಿದ ಕಾಯಿಲೆ, ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News