×
Ad

ಎ.14ಕ್ಕೆ ಲಾಕ್ ಡೌನ್ ಕೊನೆಯಾಗುವುದಿಲ್ಲ: ವಿಪಕ್ಷ ನಾಯಕರ ಜೊತೆಗಿನ ಮಾತುಕತೆಯಲ್ಲಿ ಪ್ರಧಾನಿ ಸುಳಿವು

Update: 2020-04-08 15:48 IST

ಹೊಸದಿಲ್ಲಿ: ಕೊರೋನ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎಪ್ರಿಲ್ 14ರಂದು ಲಾಕ್ ಡೌನ್ ಅನ್ನು ಕೊನೆಗೊಳಿಸಲು ಸಾಧ್ಯವಾಗದು ಎಂದು ವಿಪಕ್ಷ ನಾಯಕರ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದಾರೆ.

ಈ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇವೆ ಎಂದ ಅವರು, ಲಾಕ್ ಡೌನ್ ಶೀಘ್ರದಲ್ಲೇ ಕೊನೆಯಾಗಲಿದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ವರದಿಯಾಗಿದೆ.

ಕೋವಿಡ್ 19 ನಂತರ ಜೀವನವು ಸಾಮಾನ್ಯವಾಗಿ ಇರದು. ಖಂಡಿತವಾಗಿಯೂ 'ಕೊರೋನಗೂ ಮುನ್ನ ಮತ್ತು ಕೊರೋನ ನಂತರ' ಎನ್ನುವ ಬದಲಾವಣೆಗಳು ಇರುತ್ತದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News