ಮಾಸ್ಕ್ ಇಲ್ಲದಿದ್ದರೆ ಟವೆಲ್, ಸ್ಕಾರ್ಫ್ ಬಳಸಿ: ಮೋದಿ

Update: 2020-04-10 03:46 GMT

ಹೊಸದಿಲ್ಲಿ, ಎ.10: ಕೊರೋನ ವೈರಸ್ ಸೋಂಕು ತಡೆಯಲು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಇಲ್ಲದಿದ್ದಲ್ಲಿ ಟವೆಲ್ ಅಥವಾ ಸ್ಕಾರ್ಫ್ ಬಳಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.

ತಮ್ಮ ಕ್ಷೇತ್ರವಾದ ವಾರಣಾಸಿಯಲ್ಲಿ ಸದ್ಯದ ಸ್ಥಿತಿಗತಿಯ ಬಗ್ಗೆ ವಿಚಾರಿಸಲು ಬಿಜೆಪಿ ಸದಸ್ಯ ಹಂಸರಾಜ್ ವಿಶ್ವಕರ್ಮ ಅವರ ಜತೆ ಗುರುವಾರ ರಾತ್ರಿ ದೂರವಾಣಿಯಲ್ಲಿ ಮಾತನಾಡಿದ ಮೋದಿ, ಈ ಸಲಹೆ ನೀಡಿದರು.

ಸುಮಾರು ನಾಲ್ಕು ನಿಮಿಷ ಮಾತನಾಡಿದ ಪ್ರಧಾನಿ, ಜನರ ಸುರಕ್ಷತೆಗೆ ಸಮರೋಪಾದಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಮಾಸ್ಕ್‌ಗಾಗಿ ಹಣ ಅಥವಾ ಸಮಯ ವ್ಯರ್ಥ ಮಾಡುವುದು ಬೇಡ. ಜನತೆ ಟವೆಲ್ ಮತ್ತು ಸ್ಕಾರ್ಫ್‌ಗಳನ್ನೂ ಬಳಸಬಹುದು ಎಂದರು.

ಜನರಿಗೆ ವಿತರಿಸುವ ಸಲುವಾಗಿ ಬಿಜೆಪಿ ಕಾರ್ಯಕರ್ತರು ಮಾಸ್ಕ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಪ್ರಧಾನಿ ಗಮನಕ್ಕೆ ತಂದಾಗ, ಮೋದಿಯವರು ಈ ಸಲಹೆ ಮುಂದಿಟ್ಟರು ಎಂದು ವಿಶ್ವಕರ್ಮ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News