ಭಾರತದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 6,412ಕ್ಕೆ ಏರಿಕೆ ; ಸಾವಿನ ಸಂಖ್ಯೆ 199

Update: 2020-04-10 05:48 GMT

ಹೊಸದಿಲ್ಲಿ, ಎ.10: ಮಹಾಮಾರಿ ಕೊರೋನ ವೈರಸ್ ಸೋಂಕು ಬಾಧಿತರ ಸಂಖ್ಯೆ ಭಾರತದಲ್ಲಿ 6,412ಕ್ಕೆ ತಲುಪಿದೆ. 199 ಮಂದಿ ಈ ವರೆಗೆ ಬಲಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದಿಲ್ಲಿ  ಮತ್ತು ಮಹಾರಾಷ್ಟ್ರಗಳಲ್ಲಿ ಮಾಸ್ಕ್  ಇಲ್ಲದೆ  ಹೊರಹೋಗುವುದನ್ನು ನಿಷೇಧಿಸಲಾಗಿದೆ.  ಮಾಸ್ಕ್ ಇಲ್ಲದೆ ಹೊರಹೋಗುವುದರಿಂದ ಬಂಧನವನ್ನು ಜನರು ಎದುರಿಸಬೇಕಾಗುತ್ತದೆ.

 ಶನಿವಾರ ನಡೆಯುವ  ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು  ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪರಿಸ್ಥಿತಿಯ  ಬಗ್ಗೆ ಚರ್ಚಿಸಲಿದ್ದಾರೆ. ರಾಜ್ಯಗಳ ವರದಿಯನ್ನಾಧರಿಸಿ ಲಾಕ್ ಡೌನ್ ವಿಸ್ತರಣೆಯ ಬಗ್ಗೆ ಕೇಂದ್ರ ಸರಕಾರ ಶುಕ್ರವಾರ ನಿರ್ಧಾರ ಕೈಗೊಳ್ಳಲಿದೆ. ರಾಜ್ಯಗಳ ುಸ್ತುವಾರಿ ಸಚಿವರುಗಳು ಪ್ರಧಾನಿಗೆ ವರದಿ ಸಲ್ಲಿಸಲಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕೊರೋನ ವೈರಸ್  ಸಾಂಕ್ರಾಮಿಕ ರೋಗದ ಜಾಗತಿಕ ಬಿಕ್ಕಟ್ಟಿನ ಬಗ್ಗೆ ಮೊದಲ ಸಭೆಯನ್ನು ನಡೆಸಿದ್ದು, ಇದು ಈಗಾಗಲೇ 95,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 1.5 ಮಿಲಿಯನ್ ಜನರಿಗೆ ಸೋಂಕು ತಗಲಿದೆ.

ಏತನ್ಮಧ್ಯೆ  ಅಮೆರಿಕದಲ್ಲಿ  ಒಂದೇ ದಿನದಲ್ಲಿ 1700 ಕ್ಕೂ ಹೆಚ್ಚು ಸಾವಿನ ಪ್ರಕರಣಗಳು  ದಾಖಲಾಗಿದೆ ಮತ್ತು ಇಟಲಿಯಲ್ಲಿ ಸಾವಿನ ಸಂಖ್ಯೆ 18,000 ದಾಟಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News