ಕೊರೋನ ಬಳಿಕದ ವಿಶ್ವದಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ಭಾರತ-ಜಪಾನ್ ಸಹಭಾಗಿತ್ವ ಪೂರಕ : ಪ್ರಧಾನಿ ಮೋದಿ

Update: 2020-04-10 18:02 GMT

ಹೊಸದಿಲ್ಲಿ, ಎ.10: ಭಾರತ- ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವು ಕೊರೋನ ಬಳಿಕದ ವಿಶ್ವಕ್ಕೆ ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ನೆರವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೋನ ವೈರಸ್ ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿಯ ಕುರಿತು ಜಪಾನ್‌ನ ಪ್ರಧಾನಿ ಶಿಂರೊ ಅಬೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಳಿಕ ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದರು. ಮಿತ್ರ ಶಿಂಝೊ ಅಬೆಯೊಂದಿಗೆ ಕೊರೋನ ವೈರಸ್ ಸೋಂಕಿನ ಬಗ್ಗೆ ಫಲಪ್ರದ ಚರ್ಚೆ ನಡೆಸಿದ್ದೇನೆ. ಭಾರತ- ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವು ಕೊರೋನ ಬಳಿಕದ ವಿಶ್ವಕ್ಕೆ ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ನೆರವಾಗಲಿದೆ. ಇದರ ಪ್ರಯೋಜನ ಉಭಯ ದೇಶಗಳ ಜನರಿಗೆ, ಇಂಡೊ-ಪೆಸಿಫಿಕ್ ವಲಯದ ಜನತೆಗೆ ಲಭಿಸಲಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಇದೇ ವಿಷಯದ ಬಗ್ಗೆ ನೇಪಾಳದ ಪ್ರಧಾನಿ ಕೆಪಿ ಶರ್ಮ ಒಲಿ ಜತೆಗೂ ಮಾತನಾಡಿದ್ದು, ಕೊರೋನ ವೈರಸ್‌ನಿಂದ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ಸವಾಲನ್ನು ಎದುರಿಸುವಲ್ಲಿ ನೇಪಾಳದ ಜನತೆ ತೋರಿರುವ ದೃಢಸಂಕಲ್ಪ ಶ್ಲಾಘನೀಯ. ಕೊರೋನ ವೈರಸ್ ಎದುರಿಗಿನ ಈ ಹೋರಾಟದಲ್ಲಿ ನಾವು ನೇಪಾಳದೊಂದಿಗೆ ಒಗ್ಗಟ್ಟು ಪ್ರದರ್ಶಿಸುತ್ತೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News