×
Ad

ಚರ್ಚ್ ಮೇಲೆ ದಾಳಿ ನಡೆಸಿದವರನ್ನು ಕ್ಷಮಿಸಿದ್ದೇವೆ: ಶ್ರೀಲಂಕಾ ಚರ್ಚ್

Update: 2020-04-12 21:47 IST

ಕೊಲಂಬೊ, ಎ. 12: ಕಳೆದ ವರ್ಷದ ಈಸ್ಟರ್ ದಿನದಂದು ಚರ್ಚ್‌ಗಳ ಮೇಲೆ ದಾಳಿ ನಡೆಸಿರುವ ಆತ್ಮಹತ್ಯಾ ಬಾಂಬರ್‌ಗಳನ್ನು ಕ್ಷಮಿಸಿರುವುದಾಗಿ ಶ್ರೀಲಂಕಾದ ರೋಮನ್ ಕೆಥೋಲಿಕ್ ಚರ್ಚ್ ರವಿವಾರ ಹೇಳಿದೆ.

‘‘ನಮ್ಮನ್ನು ನಾಶಪಡಿಸಲು ಪ್ರಯತ್ನಿಸಿದ ಶತ್ರುಗಳಿಗೆ ನಾವು ಪ್ರೀತಿ ನೀಡಿದ್ದೇವೆ. ನಾವು ಅವರನ್ನು ಕ್ಷಮಿಸಿದ್ದೇವೆ’’ ಎಂದು ಈಸ್ಟರ್ ದಿನದ ಪ್ರಾರ್ಥನೆಯ ವೇಳೆ ಕಾರ್ಡಿನಲ್ ಮಾಲ್ಕಮ್ ರಂಜಿತ್ ಹೇಳಿದರು. ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಪ್ರಾರ್ಥನೆಯನ್ನು ಟಿವಿ ಸ್ಟುಡಿಯೊದಿಂದ ಪ್ರಸಾರಿಸಲಾಯಿತು.

ಕಳೆದ ವರ್ಷದ ಎಪ್ರಿಲ್ 21ರಂದು ನಡೆದ ಸರಣಿ ದಾಳಿಯಲ್ಲಿ ಕನಿಷ್ಠ 279 ಮಂದಿ ಮೃತಪಟ್ಟಿದ್ದಾರೆ ಹಾಗೂ 593 ಮಂದಿ ಗಾಯಗೊಂಡಿದ್ದಾರೆ. ಮೂರು ಚರ್ಚ್‌ಗಳು ಮತ್ತು ಮೂರು ವಿಲಾಸಿ ಹೊಟೇಲ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News