×
Ad

ಈಶಾನ್ಯ ದಿಲ್ಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಸಂಘಟಿಸಿದ್ದ ಆರೋಪ: ಜಾಮಿಯಾ ವಿದ್ಯಾರ್ಥಿನಿ ಬಂಧನ

Update: 2020-04-12 23:53 IST

ಹೊಸದಿಲ್ಲಿ, ಎ.12: ದಿಲ್ಲಿಯ ಈಶಾನ್ಯ ಜಿಲ್ಲೆಯಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ಸಂಘಟಿಸಿದ್ದ ಆರೋಪದಡಿ ಜಾಮಿಯಾ ಸಮನ್ವಯ ಸಮಿತಿಯ ಮಾಧ್ಯಮ ಸಂಯೋಜಕಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಸಫುರಾ ಜರ್ಗರ್ ಬಂಧಿತ ವಿದ್ಯಾರ್ಥಿನಿ. ಕಳೆದ ವರ್ಷ ಜಫ್ರಾಬಾದ್‌ನಲ್ಲಿ ನಡೆದಿದ್ದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ಸಂಯೋಜಿಸುವಲ್ಲಿ ಈಕೆ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಇಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಬಳಿಕ ಹಿಂಸಾಚಾರಕ್ಕೆ ತಿರುಗಿದಾಗ ಗುಪ್ತಚರ ವಿಭಾಗದ ಸಿಬಂದಿ ಅಂಕಿತ್ ಶರ್ಮ, ಹೆಡ್‌ಕಾನ್‌ಸ್ಟೇಬಲ್ ರತ್ತನ್‌ಲಾಲ್ ಸಹಿತ ಕನಿಷ್ಟ 53 ಮಂದಿ ಮೃತಪಟ್ಟಿದ್ದರು.

ಈ ಮಧ್ಯೆ, ಪ್ರತಿಭಟನೆ ಸಂದರ್ಭ ಹಿಂಸಾಚಾರ ನಡೆಸಲು ಸಂಚು ಹೂಡಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಜಾಮಿಯಾ ವಿವಿ ವಿದ್ಯಾರ್ಥಿಯ ಪೊಲೀಸ್ ಕಸ್ಟಡಿಯ ಅವಧಿಯನ್ನು ದಿಲ್ಲಿಯ ಕೋರ್ಟ್ ಎಪ್ರಿಲ್ 15ರವರೆಗೆ ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News