ದಿಲ್ಲಿಯಲ್ಲಿ ಸತತ ಎರಡನೇ ದಿನ ಭೂಕಂಪನ

Update: 2020-04-13 16:45 GMT

 ಹೊಸದಿಲ್ಲಿ, ಎ.13: ಸೋಮವಾರ ಮಧ್ಯಾಹ್ನ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ್ದು ಈ ಪ್ರದೇಶಗಳಲ್ಲಿ ಸತತ ದ್ವಿತೀಯ ದಿನವೂ ಲಘು ಭೂಕಂಪನವಾಗಿದೆ ಎಂದು ವರದಿಯಾಗಿದೆ.

 ರಿಕ್ಟರ್ ಮಾಪಕದಲ್ಲಿ 2.7 ಪ್ರಮಾಣದ ಭೂಕಂಪನ ಸೋಮವಾರ ಅಪರಾಹ್ನ 1:26ಕ್ಕೆ ಸಂಭವಿಸಿದ್ದು 5 ಕಿ.ಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಸಾವು-ನೋವು, ಆಸ್ತಿಪಾಸ್ತಿಗೆ ನಷ್ಟವಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರವಿವಾರವೂ ಲಘು ಭೂಕಂಪನ ಸಂಭವಿಸಿತ್ತು.

ಐದು ಭೂಕಂಪನ ವಲಯದಲ್ಲಿ ದಿಲ್ಲಿ ನಾಲ್ಕನೇ ವಲಯದಲ್ಲಿದೆ. ದಿಲ್ಲಿ ಭೂಕಂಪನದ ಕೇಂದ್ರ ಬಿಂದುವಾಗುವುದು ಅಪರೂಪದ ವಿದ್ಯಮಾನವಾಗಿದೆ. ಆದರೆ ಮಧ್ಯಏಶ್ಯ ಅಥವಾ ಹಿಮಾಲಯ ವಲಯದಲ್ಲಿ ಭೂಕಂಪನವಾದರೂ ದಿಲ್ಲಿ ನಗರದಲ್ಲಿ ಭೂಮಿ ಕಂಪಿಸಿದ ಅನುಭವವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News