×
Ad

ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ವಿರುದ್ಧ ಎಫ್‍ಐಆರ್

Update: 2020-04-13 18:05 IST

ಗಾಂಧಿನಗರ: ಸರಕಾರಿ ಆದೇಶವೊಂದನ್ನು ತಪ್ಪಾಗಿ ಅರ್ಥೈಸಿಕೊಂಡ ಆರೋಪದ ಮೇಲೆ ಕೇರಳ ಮೂಲದ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರ ವಿರುದ್ಧ ಗುಜರಾತ್ ರಾಜ್ಯದ ರಾಜಕೋಟ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಅಲ್ಲಿ ಹೇರಲಾದ ನಿರ್ಬಂಧಗಳನ್ನು ವಿರೋಧಿಸಿ ಗೋಪಿನಾಥನ್ ಅವರು ಆಗಸ್ಟ್ 21ರಂದು ತಮ್ಮ ಸರಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರೆ, ಎಂಟು ತಿಂಗಳ ನಂತರವೂ ಅವರ ರಾಜೀನಾಮೆಯನ್ನು ಅಂಗೀಕರಿಸದ ಸರಕಾರ ಇತ್ತೀಚಿಗಿನ ಕೊರೋನ ವೈರಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿ ಅವರಿಗೆ ಪತ್ರ ಬರೆದಿತ್ತು.

ಈ ಪತ್ರಕ್ಕೆ ಉತ್ತರಿಸಿದ್ದ ಗೋಪಿನಾಥನ್ ತಮ್ಮನ್ನು ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಹೇಳಿದ ಹಿಂದೆ ಒಳ್ಳೆಯ ಉದ್ದೇಶವಿಲ್ಲ, ಬದಲಾಗಿ ತನಗೆ ಇನ್ನಷ್ಟು ಕಿರುಕುಳ ನೀಡುವ ಉದ್ದೇಶವಿದೆ ಎಂದು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

2012ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಗೋಪಿನಾಥನ್ ಅವರು ರಾಜೀನಾಮೆ ನೀಡಿದ್ದ ಸಂದರ್ಭ ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಇಂಧನ ಹಾಗೂ ಅಸಾಂಪ್ರದಾಯಿಕ ಇಂದನ ಇಲಾಖೆಯ ಕಾರ್ಯದರ್ಶಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News