×
Ad

ನಾಗಾಲ್ಯಾಂಡ್‌ನಲ್ಲಿ ವರದಿಯಾದ ಮೊದಲ ಕರೋನ ವೈರಸ್ ಪ್ರಕರಣ

Update: 2020-04-13 22:10 IST
ಸಾಂದರ್ಭಿಕ ಚಿತ್ರ

ಕೊಹಿಮಾ, ಎ.13: ನಾಗಾಲ್ಯಾಂಡ್‌ನಲ್ಲಿ ಮೊದಲ ಕೊರೋನ ವೈರಸ್ ಸೋಂಕು ಪ್ರಕರಣ ವರದಿಯಾಗಿದೆ. ಅಸ್ಸಾಮಿನ ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಪರೀಕ್ಷೆಗೊಳಗಾಗಿದ್ದ ನಾಗಾಲ್ಯಾಂಡ್ ನಿವಾಸಿಯಲ್ಲಿ ಸೋಂಕು ಇರುವುದು ರವಿವಾರ ದೃಢಪಟ್ಟಿದೆ.

ರೋಗಿಯಲ್ಲಿ ಕೋವಿಡ್-19ರ ಲಕ್ಷಣಗಳು ಕಂಡುಬಂದ ಬಳಿಕ ದಿಮಾಪುರದ ಖಾಸಗಿ ಆಸ್ಪತ್ರೆಯು ಆತನನ್ನು ಗುವಾಹಟಿ ಆಸ್ಪತ್ರೆಗೆ ಕಳುಹಿಸಿತ್ತು. ಆತನಲ್ಲಿ ಸೋಂಕು ದೃಢಪಟ್ಟಿದ್ದು,ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಸ್ಸಾಂ ಸಚಿವ ಹಿಮಂತ ಬಿಸ್ವ ಅವರು ಟ್ವೀಟಿಸಿದ್ದಾರೆ.

ಮೊದಲ ಕರೋನ ವೈರಸ್ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ ಸರಕಾರವು ರಾಜಧಾನಿ ಕೊಹಿಮಾದ ಹಲವಾರು ಪ್ರದೇಶಗಳಲ್ಲಿ ಸೀಲ್‌ಡೌನ್ ಜಾರಿಗೊಳಿಸಿದೆ. ಇದರೊಂದಿಗೆ ಈಶಾನ್ಯ ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 34ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News