ಭಾರತೀಯ ಸೇನೆಯಲ್ಲಿ 8 ಮಂದಿಗೆ ಕೊರೋನ ವೈರಸ್

Update: 2020-04-17 10:37 GMT

ಹೊಸದಿಲ್ಲಿ : ಭಾರತೀಯ ಸೇನೆಯ ಎಂಟು ಮಂದಿ ಸಿಬ್ಬಂದಿ ಇಲ್ಲಿಯ ತನಕ ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆಂದು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರಾವಣೆ ನೀಡಿದ್ದಾರೆ.

ಸೋಂಕಿತರ ಪೈಕಿ ಇಬ್ಬರು ವೈದ್ಯರು ಹಾಗೂ ಒಬ್ಬರು  ನರ್ಸಿಂಗ್ ಸಹಾಯಕಿಯಾಗಿದ್ದಾರೆ. ಒಟ್ಟು ನಾಲ್ಕು ಮಂದಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಲಡಾಖ್‍ ನಿಂದ ವರದಿಯಾದ ಒಂದು ಪ್ರಕರಣದಲ್ಲಿ ಸಿಬ್ಬಂದಿ  ಸಂಪೂರ್ಣ ಗುಣಮುಖರಾಗಿ ಈಗ ಮತ್ತೆ ಕರ್ತವ್ಯದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾರತೀಯ ನೌಕಾಪಡೆ ಹಾಗೂ ವಾಯುದಳದಲ್ಲಿ ಇಲ್ಲಿಯ ತನಕ ಒಂದೇ ಒಂದು ಕೊರೋನ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಆದರೆ ವಾಯುಪಡೆ ಮೂರು ಸಿಬ್ಬಂದಿಯನ್ನು ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನಿನಲ್ಲಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News