×
Ad

ಕಳ್ಳರೆಂದು ಶಂಕಿಸಿ ಮೂವರ ಥಳಿಸಿ ಹತ್ಯೆ: ಕೊರೋನ ಭೀತಿ ನಡುವೆ ಅಮಾನುಷ ಕೃತ್ಯ

Update: 2020-04-17 19:49 IST
ಸಾಂದರ್ಭಿಕ ಚಿತ್ರ

ಪಾಲ್ಘರ್,ಎ.17: ಗ್ರಾಮಸ್ಥರ ಗುಂಪೊಂದು ಕಳ್ಳರೆಂಬ ಶಂಕೆಯಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಹೊರಗೆಳೆದು ಕಲ್ಲು ಮತ್ತು ಬಡಿಗೆಗಳಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ಪಾಲ್ಘರ್ ಜಿಲ್ಲೆಯ ಗಡಚಿಂಚಳೆ ಗ್ರಾಮದ ಬಳಿ ಧಾಬಡಿ-ಖನ್ವೇಲ್ ರಸ್ತೆಯಲ್ಲಿ ನಡೆದಿದೆ.

ಮೃತರು ಮುಂಬೈನಿಂದ ಪ್ರಯಾಣಿಸುತ್ತಿದ್ದರು. ರಾತ್ರಿ 9:30ರ ಸುಮಾರಿಗೆ ಕಾರನ್ನು ತಡೆದು ನಿಲ್ಲಿಸಿದ ಸ್ಥಳೀಯರ ಗುಂಪೊಂದು ಕಳ್ಳರೆಂಬ ಶಂಕೆಯಿಂದ ಅವರನ್ನು ಹೊರಗೆಳೆದು ಥಳಿಸಿದೆ. ಮಾಹಿತಿ ತಿಳಿದು ಪೊಲೀಸರು ಸ್ಥಳವನ್ನು ತಲುಪಿದಾಗ ತೀವ್ರವಾಗಿ ಗಾಯಗೊಂಡಿದ್ದ ಎಲ್ಲ ಮೂವರೂ ಮೃತಪಟ್ಟಿದ್ದರು. ಗುಂಪು ಕಾರಿಗೂ ತೀವ್ರ ಹಾನಿಯನ್ನುಂಟು ಮಾಡಿದೆ ಎಂದು ಕಾಸಾ ಪೊಲೀಸ್ ಠಾಣಾಧಿಕಾರಿ ಆನಂದರಾವ ಕಾಳೆ ಅವರು ಶುಕ್ರವಾರ ತಿಳಿಸಿದರು.

ಮೃತರ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ. ಘಟನೆಗೆ ಸಂಬಂಧಿಸಿದಂತೆ ನೂರಕ್ಕೂ ಅಧಿಕ ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News