×
Ad

ಪ್ರಚಲಿತ ಕಳವಳಗಳ ಕುರಿತು ಚರ್ಚಿಸಲು ಸಮಾಲೋಚನಾ ಸಮಿತಿ ರಚಿಸಿದ ಕಾಂಗ್ರೆಸ್

Update: 2020-04-18 20:29 IST

ಹೊಸದಿಲ್ಲಿ,ಎ.18: ಪ್ರಚಲಿತ ಕಳವಳಗಳ ಬಗ್ಗೆ ಚರ್ಚಿಸಲು ಮತ್ತು ಮಹತ್ವದ ವಿಷಯಗಳಲ್ಲಿ ಪಕ್ಷದ ಅಭಿಪ್ರಾಯಗಳು ಹಾಗೂ ನೀತಿಗಳನ್ನು ರೂಪಿಸಲು ಕಾಂಗ್ರೆಸ್ ಶನಿವಾರ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಮಿತಿಯೊಂದನ್ನು ರಚಿಸಿದೆ. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಮಿತಿಯ ಸದಸ್ಯರಾಗಿದ್ದು,ಮುಖ್ಯ ವಕ್ತಾರ ರಣದೀಪ ಸುರ್ಜೆವಾಲಾ ಅವರು ಸಂಚಾಲಕರಾಗಿದ್ದಾರೆ.

ಮಾಜಿ ವಿತ್ತಸಚಿವ ಪಿ.ಚಿದಂಬರಂ,ಮಾಜಿ ಸಚಿವರಾದ ಮನೀಷ ತಿವಾರಿ ಮತ್ತು ಜೈರಾಮ ರಮೇಶ,ಕಾಂಗ್ರೆಸ್ ನಾಯಕರಾದ ಪ್ರವೀಣ ಚಕ್ರವರ್ತಿ,ಗೌರವ ವಲ್ಲಭ, ಸುಪ್ರಿಯಾ ಶ್ರೀನೇತ ಹಾಗೂ ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ರೋಹನ ಗುಪ್ತಾ ಅವರು ಸಮಿತಿಯ ಇತರ ಸದಸ್ಯರಾಗಿದ್ದಾರೆ. ಸಮಿತಿಯು ಪ್ರತಿದಿನ ಸಭೆ ಸೇರಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಾವ ಪ್ರಚಲಿತ ಕಳವಳಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಉದ್ದೇಶಿಸಿದೆ ಎನ್ನುವುದು ಸ್ಪಷ್ಟವಾಗಿಲ್ಲ,ಆದರೆ ಕೊರೋನ ವೈರಸ್ ಪಿಡುಗನ್ನು ಎದುರಿಸಲು ನರೇಂದ್ರ ಮೋದಿ ನೇತೃತ್ವದ ಸರಕಾರವು ಅನುಸರಿಸುತ್ತಿರುವ ನೀತಿಗಳನ್ನು ಪಕ್ಷವು ತೀವ್ರವಾಗಿ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News