ಮುಂಬೈ, ಕೋಲ್ಕತಾ, ಜೈಪುರ, ಇಂದೋರ್‌ನಲ್ಲಿ ಕೋವಿಡ್-19 ಪರಿಸ್ಥಿತಿ ಗಂಭೀರ: ಕೇಂದ್ರ ಸರಕಾರ

Update: 2020-04-20 07:11 GMT

 ಹೊಸದಿಲ್ಲಿ,ಎ.20: ಮುಂಬೈ, ಪುಣೆ, ಇಂದೋರ್, ಜೈಪುರ,ಕೋಲ್ಕತಾ ಹಾಗೂ ಪಶ್ಚಿಮಬಂಗಾಳದ ಇತರ ಸ್ಥಳಗಳಲ್ಲಿ ಕೋವಿಡ್-19 ಪರಿಸ್ಥಿತಿ ವಿಶೇಷವಾಗಿ ಗಂಭೀರ ಇದೆ. ಲಾಕ್‌ಡೌನ್ ನಿಯಮಗಳ ಉಲ್ಲಂಘನೆಯಿಂದ ಕೊರೋನ ವೈರಸ್ ಹರಡುವ ಅಪಾಯ ಅಧಿಕವಿದೆ ಎಂದು ಕೇಂದ್ರ ಸರಕಾರ ಸೋಮವಾರ ತಿಳಿಸಿದೆ.

ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂವಹನ ನಡೆಸಿದ ಕೇಂದ್ರ ಗೃಹ ಸಚಿವಾಲಯ,ಕೋವಿಡ್-19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯರಕ್ಷಣಾ ವೃತ್ತಿಪರರ ಮೇಲೆ ಹಿಂಸಾ ದಾಳಿ ನಡೆದಿರುವ ಹಲವು ಘಟನೆಗಳು ನಡೆದಿವೆ. ಸುರಕ್ಷಿತ ಅಂತರ ನಿಯಮ ಪಾಲನೆಯಲ್ಲಿ ಹಾಗೂ ಪಟ್ಟಣ ಪ್ರದೇಶದಲ್ಲಿ ವಾಹನಗಳ ಸಂಚಾರ ನಡೆಸುವ ಮೂಲಕ ನಿಯಮ ಸಂಪೂರ್ಣ ಉಲ್ಲಂಘನೆಯಾಗಿದೆ.ಇದು ಸಂಪೂರ್ಣ ನಿಲ್ಲಬೇಕಾಗಿದೆ ಎಂದು ತಾಕೀತು ಮಾಡಿದೆ.

ಮಧ್ಯಪ್ರದೇಶದ ಇಂದೋರ್, ಮಹಾರಾಷ್ಟ್ರದ ಮುಂಬೈ, ಪುಣೆ, ರಾಜಸ್ಥಾನದ ಜೈಪುರ, ಪಶ್ಚಿಮಬಂಗಾಳದ ಕೋಲ್ಕತಾ,ಹೌರ್ಹಾ,ಪೂರ್ವಮಿಡ್ನಾಪುರ,ಉತ್ತರ 24 ಪರಗಣ, ಡಾರ್ಜಿಲಿಂಗ್, ಕಾಲಿಂಪಾಂಗ್‌ ಹಾಗೂ ಜಲಾಪೈಗುರಿಯಲ್ಲಿ ಕೋವಿಡ್-19  ಪರಿಸ್ಥಿತಿಯು ಮುಖ್ಯವಾಗಿ ಗಂಭೀರವಾಗಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News