×
Ad

ಭಾರತದಲ್ಲಿ ಕೊರೋನ ವೈರಸ್ ಇರುವ ಶೇ.80ರಷ್ಟು ಜನರಲ್ಲಿ ಲಕ್ಷಣಗಳೇ ಇಲ್ಲ: ಹಿರಿಯ ವಿಜ್ಞಾನಿಗಳ ಆತಂಕ

Update: 2020-04-20 13:24 IST

ಹೊಸದಿಲ್ಲಿ,ಎ.20: ಭಾರತದಲ್ಲಿ ಕೊರೋನ ವೈರಸ್ ಸೋಂಕು ಇರುವ ಶೇ.80ರಷ್ಟು ಜನರು ಸೋಂಕಿನ ಯಾವುದೇ ಲಕ್ಷಣ ತೋರಿಸುವುದಿಲ್ಲ. ಇದು ಚಿಂತೆಯ ವಿಚಾರವಾಗಿದೆ ಎಂದು ದೇಶದ ಉನ್ನತ ವೈದ್ಯಕೀಯ ಸಂಶೋಧನ ಸಂಸ್ಥೆಯ ಹಿರಿಯ ವಿಜ್ಞಾನಿ ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

 ಶೇಕಡಾ 80ರಷ್ಟು ಪ್ರಕರಣಗಳು ಲಕ್ಷಣರಹಿತವಾಗಿದೆ. ಅವರನ್ನು ಪತ್ತೆ ಹಚ್ಚುವುದು ಅತಿದೊಡ್ಡ ಚಿಂತೆಯಾಗಿದೆ. ಸಂಪರ್ಕವನ್ನು ಪತ್ತೆ ಹಚ್ಚುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಹಿರಿಯ ವಿಜ್ಞಾನಿ ಡಾ. ರಾಮನ್ ಆರ್ ಗಂಗಖೇಡ್ಕರ್ ಹೇಳಿದ್ದಾರೆ.

ಭಾರತದಾದ್ಯಂತ 17,000ಕ್ಕೂ ಹೆಚ್ಚು ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು 543 ಸಾವುಗಳು ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News