ತಾಯಿಯ ಹೊಟ್ಟೆ ತುಂಬಿಸಲು ಕಳ್ಳತನ ಮಾಡಿದ ಬಾಲಕ: ವಿಶೇಷ ತೀರ್ಪು ನೀಡಿದ ನ್ಯಾಯಾಧೀಶರು

Update: 2020-04-20 15:40 GMT

ನಳಂದ: ಹಸಿದು ಕಂಗಾಲಾಗಿದ್ದ ತಾಯಿಯ ಹೊಟ್ಟೆ ತುಂಬಿಸಲು ಕಳ್ಳತನ ಮಾಡಿ ಸಿಕ್ಕಿ ಬಿದ್ದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನಿಗೆ ನ್ಯಾಯಾಧೀಶರು ಪಡಿತರ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.

ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಬಾಲಕನ ಪರವಾಗಿ ತೀರ್ಪು ನೀಡಿದರು. ಸುಧಾರಿಸಿಕೊಳ್ಳಲು ಈತನಿಗೆ ಅವಕಾಶ ನೀಡುತ್ತಿರುವುದಾಗಿ ತೀರ್ಪಿನಲ್ಲಿ ಸ್ಪಷ್ಟಪಡಿಸಿದರು.

ತನ್ನ ಅಪರಾಧವನ್ನು ಒಪ್ಪಿಕೊಂಡ ನಾಗೇಂದ್ರ ರಾವ್, “ಒಂದು ಕಡೆ ಕಳ್ಳತನ ಮಾಡಿ ಓಡಿಹೋಗುತ್ತಿದ್ದಾಗ ಪೊಲೀಸರು ಹಿಡಿದರು. ಸ್ಥಳೀಯರು ಗುಂಪು ಸೇರಿ ಹೊಡೆದರು. ಪೊಲೀಸರು ಜೈಲಿಗೆ ಅಟ್ಟಿದರು” ಎಂದು ಹೇಳಿದ್ದಾನೆ.

“ಬಳಿಕ ನ್ಯಾಯಾಲಯಕ್ಕೆ ಕರೆತಂದರು. ನ್ಯಾಯಾಧೀಶರಿಗೆ ನನ್ನ ಸ್ಥಿತಿ ಅರ್ಥವಾಗಿ, ನಾನು ಏಕೆ ಕಳ್ಳತನಕ್ಕೆ ಇಳಿದೆ ಎನ್ನುವುದು ಮನವರಿಕೆಯಾಯಿತು. ನನ್ನ ತಾಯಿ ಅಸ್ವಸ್ಥರಾಗಿದ್ದು, ಅವರಿಗೆ ತಿನ್ನಲು ಆಹಾರವೂ ಇರಲಿಲ್ಲ. ಏನಾದರೂ ತಿನ್ನಲು ಕೊಡಲೇಬೇಕಿತ್ತು”ಎಂದು ಆತ ವಿವರಿಸಿದ್ದಾನೆ.

ಈ ಕುಟುಂಬಕ್ಕೆ ಪಡಿತರ ಚೀಟಿ ಇದ್ದು, ಸರ್ಕಾರದ ಪಿಂಚಣಿ ಯೋಜನೆಯ ನೆರವೂ ಪಡೆಯುತ್ತಿದ್ದಾರೆ. ಆದರೆ ವಸತಿ ವ್ಯವಸ್ಥೆ ಮಾತ್ರ ಇಲ್ಲ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News