ಕೊರೋನವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ: ವಿಶ್ವ ಆರೋಗ್ಯ ಸಂಸ್ಥೆ

Update: 2020-04-21 17:32 GMT

ಜಿನೀವ, ಎ. 21: ನೋವೆಲ್-ಕೊರೋನವೈರಸ್ ಕಳೆದ ವರ್ಷ ಚೀನಾದಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಹಾಗೂ ಅದನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಲಾಗಿಲ್ಲ ಎನ್ನುವುದನ್ನು ಲಭ್ಯವಿರುವ ಎಲ್ಲ ಪುರಾವೆಗಳು ಸೂಚಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಹೇಳಿದೆ.

ಆದರೆ, ವೈರಸ್ ಪ್ರಾಣಿಯಿಂದ ಮನುಷ್ಯರಿಗೆ ಹೇಗೆ ಬಂತು ಎನ್ನುವುದು ಸ್ಪಷ್ಟವಾಗಿಲ್ಲ ಹಾಗೂ ಒಂದು ಪ್ರಾಣಿಯಿಂದ ಮನುಷ್ಯರಿಗೆ ವೈರಸ್ ಹರಡಬೇಕಾದರೆ ಒಂದು ಮಧ್ಯವರ್ತಿ ಪ್ರಾಣಿಯೊಂದು ಖಂಡಿತವಾಗಿಯೂ ಇತ್ತು ಎಂದು ಜಿನೀವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರೆ ಫಡೇಲಾ ಚಾಯಿಬ್ ಹೇಳಿದರು.

‘‘ವೈರಸ್ ಬಾವಲಿಗಳಲ್ಲಿ ಇದ್ದಿರುವ ಸಾಧ್ಯತೆಯಿದೆ. ಆದರೆ ಅದು ಬಾವಲಿಗಳಿಂದ ಮನುಷ್ಯರಿಗೆ ಹೇಗೆ ಬಂತು ಎನ್ನುವುದನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ’’ ಎಂದರು.

ಕೊರೋನವೈರಸ್ ಚೀನಾದ ವುಹಾನ್ ನಗರದ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರ ಹಲವು ದೇಶಗಳ ನಾಯಕರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News