ಪಶ್ಚಿಮ ಬಂಗಾಳ: ದೋಷಯುಕ್ತ ಕಿಟ್‌ಗಳನ್ನು ಬದಲಿಸಿದ ಐಸಿಎಂಆರ್

Update: 2020-04-21 18:18 GMT

ಕೋಲ್ಕತಾ, ಎ.21: ಪಶ್ಚಿಮ ಬಂಗಾಳದ ಕೆಲವು ಸರಕಾರಿ ಅಧೀನದ ಪ್ರಯೋಗಾಲಯಗಳಿಗೆ ಪೂರೈಸಿದ್ದ ದೋಷಯುಕ್ತ ಕೊರೋನ ಸೋಂಕು ಪರೀಕ್ಷೆಯ ಕಿಟ್‌ಗಳನ್ನು ಹಿಂಪಡೆಯಲಾಗಿದೆ ಎಂದು ಎನ್‌ಐಸಿಇಡಿಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ದೋಷಯುಕ್ತ ಕಿಟ್‌ಗಳನ್ನು ಬದಲಿಸಿ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಕಿಟ್‌ಗಳನ್ನು ನೀಡಲಾಗಿದೆ ಎಂದವರು ಹೇಳಿದ್ದಾರೆ. ರಾಜ್ಯದ ಪ್ರಯೋಗಾಲಯಗಳಿಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ನ ನೋಡಲ್ ಸಂಸ್ಥೆಯಾಗಿರುವ ಎನ್‌ಐಸಿಇಡಿ ಪೂರೈಸಿರುವ ಪರೀಕ್ಷಾ ಕಿಟ್‌ಗಳು ದೋಷಪೂರ್ಣವಾಗಿದ್ದು ಇದರಲ್ಲಿ ಅಪೂರ್ಣ ವರದಿ ಬರುತ್ತದೆ. ಆದ್ದರಿಂದ ಪರೀಕ್ಷೆಯ ವರದಿ ವಿಳಂಬವಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಸರಕಾರ ಆರೋಪಿಸಿತ್ತು.

ಈ ಕಿಟ್‌ಗಳನ್ನು ಪ್ರಮಾಣೀಕರಿಸಿರದ ಕಾರಣ ದೋಷಯುಕ್ತವಾಗಿರುವ ಸಾಧ್ಯತೆಯಿದೆ. ಈ ಕಿಟ್‌ಗಳನ್ನು 20 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ಇರಿಸಿದಾಗ ತಪ್ಪು ಫಲಿತಾಂಶ ದಾಖಲಿಸುತ್ತದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ತನಿಖೆ ನಡೆಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News