ಸಾಧುಗಳ ಥಳಿಸಿ ಹತ್ಯೆಗೈದ ಪ್ರಕರಣದ ಬಂಧಿತರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ: ಮಹಾರಾಷ್ಟ್ರ ಗೃಹ ಸಚಿವ

Update: 2020-04-22 10:16 GMT

ಮುಂಬೈ: ಸಾಧುಗಳ ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ ಬಂಧಿತರಲ್ಲಿ ಒಬ್ಬನೇ ಒಬ್ಬ ಮುಸ್ಲಿಮನಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ತಿಳಿಸಿದ್ದಾರೆ.

ಈ ಅಮಾನವೀಯ ಘಟನೆಗೆ ಕೋಮು ಬಣ್ಣ ಬಳಿಯಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮಹಾರಾಷ್ಟ್ರ ಸಿಐಡಿಗೆ ಪ್ರಕರಣದ ತನಿಖೆಯನ್ನು ವಹಿಸಲಾಗಿದೆ ಎಂದರು.

“101 ಮಂದಿಯನ್ನು ಘಟನೆಗೆ ಸಂಬಂಧಿಸಿ 101 ಮಂದಿಯನ್ನು ಬಂಧಿಸಲಾಗಿದೆ, ಇದರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ. ಘಟನೆಗೆ ಕೋಮು ಬಣ್ಣ ಬಳಿಯಬೇಡಿ” ಎಂದವರು ಹೇಳಿದರು.

ಘಟನೆ ನಡೆದ ಗ್ರಾಮದಲ್ಲಿ ಮುಸ್ಲಿಮರೇ ಇಲ್ಲ

ಸಾಧುಗಳ ಥಳಿಸಿ ಹತ್ಯೆ ಪ್ರಕರಣವನ್ನು ಕೋಮುವಾದಕ್ಕೆ ತಿರುಗಿಸಲು ಹಲವು ಪ್ರಯತ್ನಗಳು ಸಾಮಾಜಿಕ ಜಾಲತಾಣದಲ್ಲಿ ನಡೆದಿದ್ದವು. ಘಟನೆಯಲ್ಲಿ ಮುಸ್ಲಿಮರು ಭಾಗಿಯಾಗಿದ್ದಾರೆ ಎಂದ ಪ್ರಚಾರ ಮಾಡಲಾಯಿತು. ಆದರೆ ಘಟನೆ ನಡೆದ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಮುಸ್ಲಿಮರೇ ಇಲ್ಲ. ಗ್ರಾಮದ ಎಲ್ಲಾ ಜನರು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು theprint.in ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News