×
Ad

ಕೊರೋನ ಪರೀಕ್ಷೆಯ ಪ್ರಮಾಣ ಹೆಚ್ಚಿಸುವ ಉದ್ದೇಶ ಸಂಚಾರಿ ಪ್ರಯೋಗಾಲಯ ಆರಂಭ

Update: 2020-04-23 23:23 IST

 ಹೊಸದಿಲ್ಲಿ, ಎ.23: ಕೊರೋನ ವೈರಸ್ ಸೋಂಕು ಪರೀಕ್ಷೆ ಹಾಗೂ ಕೊರೋನ ವೈರಸ್ ಸಂಬಂಧಿತ ಸಂಶೋಧನೆ ಪ್ರಕ್ರಿಯೆಗೆ ವೇಗ ನೀಡುವ ಉದ್ದೇಶದಿಂದ ರೂಪಿಸಲಾದ ಸಂಚಾರಿ ಪ್ರಯೋಗಾಲಯವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

 ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯು ಹೈದರಾಬಾದ್‌ನ ಇಎಸ್‌ಐ ಆಸ್ಪತ್ರೆ ಮತ್ತು ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ರೂಪಿಸಿರುವ ಮೊಬೈಲ್ ವೈರಾಲಜಿ ರಿಸರ್ಚ್ ಆ್ಯಂಡ್ ಡಯಗ್ನೋಸ್ಟಿಕ್ಸ್ ಲ್ಯಾಬರೇಟರಿ(ಸಂಚಾರಿ ವೈರಾಲಜಿ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ)ವನ್ನು ಕೇವಲ 15 ದಿನಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಿರುವುದಕ್ಕೆ ಸಚಿವ ಸಿಂಗ್ ಅಭಿನಂದನೆ ಸಲ್ಲಿಸಿದರು.

   ಈ ಪ್ರಯೋಗಾಲಯದಲ್ಲಿ ದಿನಕ್ಕೆ 1000ಕ್ಕೂ ಹೆಚ್ಚು ಸ್ಯಾಂಪಲ್‌ಗಳ ಪರಿಷ್ಕರಣೆ ಮತ್ತು ಪರೀಕ್ಷೆಯ ವ್ಯವಸ್ಥೆಯಿದ್ದು ಇದರಿಂದ ಕೊರೋನ ವೈರಸ್ ವಿರುದ್ಧ ದೇಶ ನಡೆಸುತ್ತಿರುವ ಹೋರಾಟಕ್ಕೆ ಬಲ ಬಂದಂತಾಗಿದೆ ಎಂದವರು ಹೇಳಿದರು. ಜೈವಿಕ ಸುರಕ್ಷತೆ ಮಟ್ಟ 2 ಮತ್ತು ಮೂರರ ಸಂಯೋಜನೆಯಾಗಿರುವ ಈ ಪ್ರಯೋಗಾಲಯವನ್ನು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಜೈವಿಕ ಸುರಕ್ಷಾ ಮಾನದಂಡದಂತೆ, ಅಂತರಾಷ್ಟ್ರೀಯ ಮಾರ್ಗದರ್ಶಿ ಸೂತ್ರದ ಅನ್ವಯ ರೂಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News