ಭಾರತದ ಫುಟ್ಬಾಲ್ ದಂತಕತೆ ಚುನಿ ಗೋಸ್ವಾಮಿ ನಿಧನ

Update: 2020-04-30 15:22 GMT

ಹೊಸದಿಲ್ಲಿ, ಎ.30: ಭಾರತದ ಫುಟ್ಬಾಲ್ ದಂತಕತೆ, 1962ರ ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ತಂಡದ ನಾಯಕರಾಗಿದ್ದ ಚುನಿ ಗೋಸ್ವಾಮಿ ಗುರುವಾರ ಸಂಜೆ 5 ಗಂಟೆಗೆ ಕೋಲ್ಕತಾದಲ್ಲಿ ಹೃದಯಾಘಾತದಿಂದ ನಿಧನರಾದರು. ಬಂಗಾಳದ ಪರ ಪ್ರಥಮ ದರ್ಜೆ ಕ್ರಿಕೆಟನ್ನ್ನೂ ಆಡಿರುವ ಐಕಾನ್ ಕ್ರೀಡಾಪಟು ಗೋಸ್ವಾಮಿಗೆ 82 ವರ್ಷ ವಯಸ್ಸಾಗಿತ್ತು. ಇಲ್ಲಿನ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

ಮೃತರು ಪತ್ನಿ ಬಸಂತಿ ಹಾಗೂ ಪುತ್ರ ಸುದೀಪ್ತೊರನ್ನು ಅಗಲಿದ್ದಾರೆ.

‘‘ಅವರಿಗೆ ಹೃದಯಾಘಾತವಾಗಿತ್ತು ಹಾಗೂ ಸಂಜೆ  5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ’’ಎಂದು ಕುಟುಂಬ ಮೂಲಗಳು ತಿಳಿಸಿವೆ.

ಗೋಸ್ವಾಮಿ ಮಧುಮೇಹ, ನರ ಸಂಬಂಧಿತ ಸಮಸ್ಯೆಗಳಿಂದಲೂ ಬಳಲುತ್ತಿದ್ದರು.

ಫುಟ್ಬಾಲ್ ಆಟಗಾರನಾಗಿ ಭಾರತದ ಪರ ಗೋಸ್ವಾಮಿ 1956ರಿಂದ 1964ರ ತನಕ 50 ಪಂದ್ಯಗಳಲ್ಲಿ ಆಡಿದ್ದರು. ಕ್ರಿಕೆಟಿಗನಾಗಿ ಬಂಗಾಳ ತಂಡವನ್ನು 1962ರಿಂದ 1973ರ ತನಕ 46 ಪ್ರಥಮ ದರ್ಜೆ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಯಾವಾಗಲೂ ಮೋಹನ್ ಬಗಾನ್ ಜರ್ಸಿಯನ್ನು ಧರಿಸುತ್ತಿದ್ದ ಗೋಸ್ವಾಮಿ ಕ್ಲಬ್‌ನ ಲೆಜೆಂಡ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News