×
Ad

ಲಾಕ್‌ಡೌನ್ ಅವಧಿಯಲ್ಲಿ ವಿಕಲಾಂಗರಿಗೆ ವೇತನ ಸಹಿತ ರಜೆ: ಬ್ಯಾಂಕ್, ವಿಮಾ ಸಂಸ್ಥೆಗಳಿಗೆ ಕೇಂದ್ರ ಆದೇಶ

Update: 2020-04-30 21:51 IST

ಹೊಸದಿಲ್ಲಿ,ಎ.29: ಸಾರ್ವಜನಿಕರಂಗದ ಬ್ಯಾಂಕುಗಳು ಹಾಗೂ ವಿಮಾ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ವಿಕಲಾಂಗರಿಗೆ ಲಾಕ್‌ಡೌನ್ ಅವಧಿ ಮುಗಿಯುವವರೆಗೂ ವೇತನ ಕಡಿತವಿಲ್ಲದೆ ವಿಶೇಷ ರಜೆಯನ್ನು ನೀಡಲಾಗುವುದೆಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಗುರುವಾರ ತಿಳಿಸಿದೆ.

 ಲಾಕ್‌ಡೌನ್ ಸಮಯದಲ್ಲಿ ತನ್ನ ವಿಕಲಾಂಗ ಉದ್ಯೋಗಿಗಳ ಗೈರುಹಾಜರಿಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ‘ಅನಾರೋಗ್ಯದ ರಜೆ’ ಎಂದು ಪರಿಗಣಿಸುತ್ತಿದೆಯೆಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ವಿಕಲಾಂಗರ ಸಬಲೀಕರಣ ಸಚಿವಾಲಯವು ಈ ವಿಷಯವನ್ನು ವಿತ್ತ ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಗಮನಕ್ಕೆ ತಂದಿತ್ತು.

   ರಾಷ್ಟ್ರೀಯ ಅಂಧರ ಒಕ್ಕೂಟವು ಸಬಲೀಕರಣ ಸಚಿವಾಲಯಕ್ಕೆ ದೂರು ನೀಡಿತ್ತು. ಭಿನ್ನಸಾಮರ್ಥ್ಯದ ಉದ್ಯೋಗಿಗಳಿಗೆ ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ವಿನಾಯಿತಿ ನೀಡಿರುವುದರಿಂದ, ಅವರ ಗೈರುಹಾಜರಿಯನ್ನು ‘ಅನಾರೋಗ್ಯದ ರಜೆ’ ಎಂದು ಪರಿಗಣಿಸುವುದು ಸೂಕ್ತವಲ್ಲವೆಂದು ವಿಕಲಾಂಗರ ಸಬಲೀಕರಣ ಸಚಿವಾಲಯವು ವಿತ್ತ ಸಚಿವಾಲಯಕ್ಕೆ ಪತ್ರ ಬರೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News