ಕುವೈತ್‌ಗೆ ಭಾರತದ ನೂತನ ರಾಯಭಾರಿಯಾಗಿ ಸಿಬಿ ಜಾರ್ಜ್

Update: 2020-04-30 16:30 GMT

ಹೊಸದಿಲ್ಲಿ,ಎ.30: ಕುವೈತ್‌ಗೆ ಭಾರತದ ರಾಯಭಾರಿಯಾಗಿ ಸಿಬಿ ಜಾರ್ಜ್ ನೇಮಕಗೊಂಡಿದ್ದಾರೆ.

1993ರ ಸಾಲಿನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾದ ಸಿಬಿ ಜಾರ್ಜ್ ಅವರು ಈ ಮೊದಲು ಕೈರೋ, ದೋಹಾ, ಇಸ್ಲಾಮಾಬಾದ್, ಟೆಹರಾನ್, ರಿಯಾದ್ ಹಾಗೂ ವಾಶಿಂಗ್ಟನ್ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ರಾಜಧಾನಿಗಳಲ್ಲಿನ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದರು.

ಸಿಬಿ ಅವರು ಪ್ರಸಕ್ತ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂಲತಃ ಕೇರಳದ ಕೊಟ್ಟಾಯಂ ಜಿಲ್ಲೆಯವರಾದ ಸಿಬಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣಗಳಲ್ಲಿ ಚಿನ್ನದ ಪದಕ ವಿಜೇತರು. ಅರೇಬಿಕ್ ಭಾಷೆಯಲ್ಲಿಯೂ ಅವರು ಡಿಪ್ಲೊಮಾ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News