×
Ad

ದಿಲ್ಲಿಯ ಒಂದೇ ಕಟ್ಟಡದ 44 ನಿವಾಸಿಗಳಲ್ಲಿ ಕೊರೋನ ವೈರಸ್

Update: 2020-05-02 16:39 IST

ಹೊಸದಿಲ್ಲಿ: ದಿಲ್ಲಿಯ ಕಪಶೇರ ಪ್ರದೇಶದ ಕಟ್ಟಡವೊಂದರಲ್ಲಿ ವಾಸವಾಗಿರುವ 44 ಮಂದಿಗೆ ಕೊರೋನ ಸೋಂಕು ತಗಲಿದೆ. ಈ ಕಟ್ಟಡದ ನಿವಾಸಿಗಳು ಹತ್ತು ದಿನಗಳ ಹಿಂದೆ ಕೊರೋನ ಪರೀಕ್ಷೆಗೆ ಒಳಗಾಗಿದ್ದರು. ಎಪ್ರಿಲ್ 18ರಂದು ಕೊರೋನ ಪಾಸಿಟಿವ್ ಆದ ವ್ಯಕ್ತಿಯೊಬ್ಬರಿಂದ ಈ ಕಟ್ಟಡದಲ್ಲಿದ್ದವರಿಗೆ ಸೋಂಕು ತಗಲಿರಬೇಕೆಂದು ಶಂಕಿಸಲಾಗಿದೆ.

ಎಪ್ರಿಲ್ 20 ಹಾಗೂ 21ರಂದು ಅಧಿಕಾರಿಗಳು ಆ ಪ್ರದೇಶವನ್ನು ಸೀಲ್ ಮಾಡಿ ಒಟ್ಟು 175 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಿದ್ದರು. ಇವುಗಳ ಪೈಕಿ 67 ಮಂದಿಯ ವರದಿ ಇಂದು ಬಂದಿದ್ದು ಅವುಗಳಲ್ಲಿ 44 ವರದಿಗಳು ಪಾಸಿಟಿವ್ ಆಗಿವೆ. ಪರೀಕ್ಷಾ ವರದಿಗಳು ವಿಳಂಬವಾಗಿದ್ದರಿಂದಲೇ ಇನ್ನಷ್ಟು ಜನರು ಸೋಂಕಿಗೆ ಒಳಗಾಗಿರಬಹುದೆಂದು  ತಿಳಿಯಲಾಗಿದೆ. ಬಹಳಷ್ಟು ಜನನಿಬಿಡತೆ ಇರುವ ಈ ಪ್ರದೇಶ ಗುರ್ಗಾಂವ್‍ನ ಸಮೀಪವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News